ಯಾವುದೇ ಹೊಸ ಸಿನಿಮಾವಿರಲಿ, ಬಿಡುಗಡೆಯಾದ ದಿನವೇ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಪ್ರತೀ ಸಿನಿಮಾ ತಂಡವೂ ತಮ್ಮಿಂದಾದ ಪ್ರಯತ್ನ ನಡೆಸುತ್ತಲೇ ಇರುತ್ತವೆ.
ಇದೀಗ ವಿಕ್ರಾಂತ್ ರೋಣ ತಂಡವೂ ಪೈರಸಿ ತಡೆಗೆ ಕ್ರಮ ಕೈಗೊಂಡಿದೆ. ನಿರ್ದೇಶಕ ಅನೂಪ್ ಭಂಡಾರಿ ವ್ಯಾಟ್ಸಪ್ ನಂಬರ್ ಒಂದನ್ನು ಪ್ರಕಟಿಸಿದ್ದು, ಸಿನಿಮಾ ಅಥವಾ ದೃಶ್ಯಗಳು ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದೆ ಎಂದು ಅನಿಸಿದ ತಕ್ಷಣ 8147824034 ಎಂಬ ಸಂಖ್ಯೆಗೆ ವ್ಯಾಟ್ಸಪ್ ಮಾಡಿ ಅಥವಾ
[email protected] ಈ ಈಮೇಲ್ ಗೆ ಸಂದೇಶ ಕಳುಹಿಸಿ ಎಂದಿದ್ದಾರೆ. ಇದರಲ್ಲಿ ಚಿತ್ರತಂಡ ಎಷ್ಟು ಯಶಸ್ವಿಯಾಗುತ್ತದೋ ಕಾದು ನೋಡಬೇಕು.