ಮತ್ತೆ ಸಿಸಿಬಿ ಕಸ್ಟಡಿಗೆ ನಟಿ ಸಂಜನಾ ಗಲ್ರಾನಿ

ಸೋಮವಾರ, 14 ಸೆಪ್ಟಂಬರ್ 2020 (22:03 IST)
ಸ್ಯಾಂಡಲ್ ವುಡ್ ನಟಿ ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿರುವ ಸಂಜನಾಗೆ ಇನ್ನೆರಡು ದಿನ ಸಿಸಿಬಿ ಕಸ್ಟಡಿಗೆ ವಹಿಸಲಾಗಿದೆ.

ನಟಿ ಸಂಜನಾ ಗಲ್ರಾನಿಯ ಕೆಲವು ಆಪ್ತರು ಹಾಗೂ ಕೇಸ್ ಗೆ ಬೇಕಿದ್ದವರು ಎಸ್ಕೇಪ್ ಆಗಿದ್ದಾರೆ.

ಸಂಜನಾ ಆ್ಯಂಡ್ ಟೀಂ ನಿಂದ ಡ್ರಗ್ಸ್ ಮೂಲ ಪತ್ತೆ ಹಚ್ಚುವ ಕೆಲಸದಲ್ಲಿ ಸಿಸಿಬಿ ಅಧಿಕಾರಿಗಳು ತೊಡಗಿದ್ದಾರೆ. ಹೀಗಾಗಿ ಸಿಸಿಬಿ ಪರ ವಕೀಲರು ಐದು ದಿನ ಕಸ್ಟಡಿಗೆ ಒಪ್ಪಿಸುವಂತೆ ಕೋರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಎರಡು ದಿನ ನಟಿ ಸಂಜನಾರನ್ನು ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ