ಮಾಲ್ಡೀವ್ಸ್‌ನಲ್ಲಿ ಬೋಲ್ಡ್‌ ಆಗಿ ಪೋಸ್ ಕೊಟ್ಟ ನಟಿ ಶಾನ್ವಿ

Sampriya

ಭಾನುವಾರ, 22 ಸೆಪ್ಟಂಬರ್ 2024 (19:17 IST)
Photo Courtesy X
ಈಚೆಗೆ ಮೆರವಣಿಗೆ ಹೀರೋಯಿನ್ ಐಂದ್ರಿತಾ ರೇ ಅವರು ಬಿಕಿನಿ ತೊಟ್ಟು ಹಾಟ್ ಆಗಿ ಫೋಸ್ ಕೊಟ್ಟ ಬೆನ್ನಲ್ಲೇ ಕನ್ನಡದ 'ಮಾಸ್ಟರ್ ಪೀಸ್' ನಟಿ ಶಾನ್ವಿ ಕೂಡಾ ಬಿಕಿನಿಯಲ್ಲಿ ಪೋಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾನ್ವಿ ಅವರು ಇದೀಗ ತಮ್ಮ ಬೋಲ್ಡ್‌ ಪೋಟೋಗಳನ್ನು ಹಂಚಿಕೊಂಡು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಸಿನಿಮಾ ಶೂಟಿಂಗ್‌ನಿಂದ ಬ್ರೇಕ್ ಪಡೆದು ಶಾನ್ವಿ ಮಾಡ್ವೀವ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ.  ವೈಟ್ ಕಲರ್ ಬಿಕಿನಿ ಧರಿಸಿ ನಟಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತರ ಜತೆ ಮಾಡ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ಕನ್ನಡದ ಮಾಸ್ಟರ್ ಪೀಸ್, ಚಂದ್ರಲೇಖ, ಮಫ್ತಿ, ಬ್ಯಾಂಗ್, ಸಾಹೇಬ, ತಾರಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಮುಂಬೈ ಬೆಡಗಿಗೆ ಕನ್ನಡ ಭಾಷೆ ಮೇಲೆ ಅಪಾರವಾದ ಅಭಿಮಾನವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ