ತ್ರಿಷಾಳನ್ನ ಇಷ್ಟೊಂದು ಹಾಟ್ ಲುಕ್ಕಲ್ಲಿ ಯಾವತ್ತಾದ್ರೂ ನೋಡಿದ್ದೀರಾ?

ಬುಧವಾರ, 30 ನವೆಂಬರ್ 2016 (12:28 IST)
ಇಂಡಸ್ಟ್ರಿಗೆ ಬಂದು ಸಾಕಷ್ಟು ವರ್ಷಗಳಾದರೂ ತಮ್ಮ ಗ್ಲಾಮರನ್ನ ಇನ್ನೂ ಉಳಿಸಿಕೊಂಡಿರುವ ಕೆಲವೇ ಕೆಲವು ಬೆಡಗಿಯರಲ್ಲಿ ತ್ರಿಷಾ ಕೃಷ್ಣನ್ ಸಹ ಒಬ್ಬರು. ಇನ್ನೂ ಅದೇ ಸೊಂಟದ ಸುತ್ತಳತೆ, ಉತ್ಸಾಹ ಚಿಮ್ಮಿಸುವ ಮಂದಹಾಸ, ವಯಸ್ಸು 33ರ ಗಡಿ ದಾಟಿದ್ರೂ ಇನ್ನೂ ಟೀನೇಜ್ ಗರ್ಲ್ ತರಹವೇ ಕಾಣುವ ವಯ್ಯಾರ. 
 
ಇಷ್ಟೆಲ್ಲಾ ಇದ್ರೂ ಅವಕಾಶಗಳು ಮಾತ್ರ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗ್ತಾ ಬಂದಿವೆ. ಆಗ ತ್ರಿಷಾ ಈ ರೀತಿಯ ಹಾಟ್ ಫೋಟೋಗಳನ್ನ ರಿಲೀಸ್ ಮಾಡಿ ಮತ್ತೆ ನಿರ್ಮಾಪಕ, ನಿರ್ದೇಶಕರ ಗಮನಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. 
 
2015ರಲ್ಲಿ ಬಿಝಿನೆಸ್‌ಮೆನ್ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮತ್ತೆ ಕೆಲವೇ ತಿಂಗಳಲ್ಲಿ ಅದನ್ನ ಮುರಿದುಕೊಂಡರು. ಆಮೇಲೆ ತಮ್ಮ ಗಮನವನ್ನೆಲ್ಲಾ ಚಿತ್ರಗಳ ಕಡೆಗೆ ನೆಟ್ಟರು. ಆದರೂ ಅವರ ಗ್ರಾಫು ಆರಕ್ಕೇಳಲಿಲ್ಲ ಮೂರಕ್ಕಿಳಿಯಲಿಲ್ಲ. ಇತ್ತೀಚೆಗೆ ಬಂದ ನಾಯಕಿ ಚಿತ್ರವೂ ಹೇಳಿಕೊಳ್ಳುವ ಮಟ್ಟದಲ್ಲಿ ಸಕ್ಸರ್ ಆಗಲಿಲ್ಲ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ