ತ್ರಿಷಾ ಕೃಷ್ಣನ್, ದಕ್ಷಿಣದಲ್ಲಿ ತಮ್ಮದೇ ಆದಂತ ಫ್ಯಾನ್ ಫಾಲೋಯಿಂಗ್ ಇರುವ ತಾರೆ. ಇಷ್ಟು ದಿನ ಟಾಲಿವುಡ್, ಕೋಲಿವುಡ್ ಮತ್ತುಉ ಸ್ಯಾಂಡಲ್‌ವುಡಲ್ಲಿ ಅಭಿನಯಿಸಿರುವ ಈ ತಾರಾಮಣಿ ಇದೇ ಮೊಟ್ಟಮೊದಲ ಸಲ ಮಲಯಾಳಂ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.
ಪ್ರೇಮಂ ಹೀರೋ ನವಿನ್ ಪೌಲ್ ನಾಯಕನಟನಾಗಿರುವ ಚಿತ್ರಕ್ಕೆ ಶ್ಯಾಂಪ್ರಸಾದ್ ಆಕ್ಷನ್ ಕಟ್ ಹೇಳಲಿದ್ದಾರೆ. ಮೋಲಿವುಡ್ ಮೂಲಗಳ ಪ್ರಕಾರ ಚಿತ್ರಕ್ಕೆ ಹಾಯ್ ಜೂಡ್ ಎಂದು ಹೆಸರಿಡಲಾಗಿದೆ. ಈ ಚಿತ್ರ ಫೆಬ್ರವರಿ 2017ರಲ್ಲಿ ಸೆಟ್ಟೇರಲಿದೆಯಂತೆ.
ಕೊಚ್ಚಿ ಮತ್ತು ಮಂಗಳಪುರಂನ ಬೇರೆಬೇರೆ ಲೊಕೇಷನ್‌ಗಳಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸದ್ಯಕ್ಕೆ ಉಳಿದ ಪಾತ್ರವರ್ಗ ಮತ್ತು ತಾಂತ್ರಿಕ ಬಳಗವನ್ನು ಆಯ್ಕೆ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಇದೊಂದುದ್ ರೊಮ್ಯಾಂಟಿಕ್ ಚಿತ್ರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.