Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

Krishnaveni K

ಬುಧವಾರ, 4 ಜೂನ್ 2025 (10:45 IST)
ಬೆಂಗಳೂರು: ಐಪಿಎಲ್ ನಲ್ಲಿ ಅಭಿಮಾನಿಗಳಿಗೆ ಆರ್ ಸಿಬಿ ಕ್ರೇಜ್ ಎಷ್ಟೆಂದರೆ ನಿನ್ನೆ ನಟಿ ವೈಷ್ಣವಿ ಗೌಡ ತಮ್ಮ ಮದುವೆ ಸಂಗೀತ್ ಕಾರ್ಯಕ್ರಮದ ನಡುವೆಯೂ ಆರ್ ಸಿಬಿ ಮ್ಯಾಚ್ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ.

ವೈಷ್ಣವಿ ಗೌಡ ಮೊದಲಿನಿಂದಲೂ ಕ್ರಿಕೆಟ್ ಪ್ರೇಮಿ. ಅದರಲ್ಲೂ ಆರ್ ಸಿಬಿ ಅಪ್ಪಟ ಅಭಿಮಾನಿ. ಈಗ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ನಿನ್ನೆ ಅವರ ಮದುವೆ ಸಂಗೀತ್ ಕಾರ್ಯಕ್ರಮವಿತ್ತು. ಈ ವೇಳೆ ದೊಡ್ಡ ಪರದೆ ಮೇಲೆ ಆರ್ ಸಿಬಿ ಮ್ಯಾಚ್ ಪ್ರದರ್ಶನವೂ ಇತ್ತು.

ಸಂಗೀತ್ ಗೆ ಬಂದವರು, ವೈಷ್ಣವಿ ಗೌಡ ಸೇರಿದಂತೆ ಎಲ್ಲರೂ ಹಾಡು-ಕುಣಿತದ ನಡುವೆ ಆರ್ ಸಿಬಿಗೆ ಚಿಯರ್ಸ್ ಹೇಳಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ವೈಷ್ಣವಿ ತಾವೂ ಆರ್ ಸಿಬಿ ಗೆದ್ದಾಗ ಕುಣಿದಿದ್ದಾರೆ. ನನ್ನ ಸಂಗೀತ್ ಕಾರ್ಯಕ್ರಮ ಹೀಗೆ ನಡೆದಿತ್ತು ನೋಡಿ ಎಂದಿದ್ದಾರೆ.

ಮೊನ್ನೆಯಿಂದ ನಟಿ ವೈಷ್ಣವಿ ಗೌಡ ಮದುವೆ ಕಾರ್ಯಕ್ರಮಗಳು ಆರಂಭವಾಗಿದೆ. ಹಳದಿ ಕಾರ್ಯಕ್ರಮ ಮೊನ್ನೆ ಮನೆಯಲ್ಲಿಯೇ ನಡೆದಿತ್ತು. ನಿನ್ನೆ ಸಂಗೀತ್ ಕಾರ್ಯಕ್ರಮ ನಡೆದಿದೆ. ಮನೆಯವರೇ ನೋಡಿ ನಿಶ್ಚಯಿಸಿದ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಸಪ್ತಪದಿ ತುಳಿಯುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Vaisshnavi (@iamvaishnavioffl)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ