ಅದಿತಿ ಪ್ರಭುದೇವ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ಹೀರೋಯಿನ್

ಸೋಮವಾರ, 15 ಫೆಬ್ರವರಿ 2021 (08:51 IST)
ಬೆಂಗಳೂರು: ಇತ್ತೀಚೆಗೆ ಸೆಟ್ಟೇರುತ್ತಿರುವ ಎಲ್ಲಾ ಸಿನಿಮಾಗಳಲ್ಲೂ ಅದಿತಿ ಪ್ರಭುದೇವ ಎಂಬ ನಾಯಕಿ ನಟಿಯ ಹೆಸರು ಕೇಳಿಬರುವುದು ಕಾಮನ್ ಆಗಿದೆ. ಆ ಮಟ್ಟಿಗೆ ಅಪ್ಪಟ ಕನ್ನಡದ ಬೆಡಗಿ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


ಗೋಲ್ಡನ್ ಸ್ಟಾರ್ ಗಣೇಶ್ ರ ತ್ರಿಬಲ್ ರೈಡಿಂಗ್, ನವರಸನಾಯಕ ಜಗ್ಗೇಶ್ ರ ತೋತಾಪುರಿಯಿಂದ ಹಿಡಿದು ಮೊನ್ನೆಯಷ್ಟೇ ಟೈಟಲ್ ಅನೌನ್ಸ್ ಆದ ವಿನಯ್ ರಾಜಕುಮಾರ್ ಅವರ ‘ಅದೊಂದಿತ್ತು ಕಾಲ’ ಸಿನಿಮಾಗೂ ಅದಿತಿ ಹೀರೋಯಿನ್. ಈಗ ಸದ್ಯಕ್ಕೆ ಅದಿತಿ ಕೈಯಲ್ಲಿ 12 ಚಿತ್ರಗಳು ಇವೆ! ಈ ಪೈಕಿ ಹೆಚ್ಚಿನವುಗಳು ಚಿತ್ರೀಕರಣ ಹಂತದಲ್ಲಿದೆ. ಹೀಗಾಗಿ ಮುಂದಿನ ಎರಡು ವರ್ಷಗಳ ಮಟ್ಟಿಗೆ ಅದಿತಿ ನಿಯಮಿತವಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ