ಅದಿತಿ ಪ್ರಭುದೇವ ಅದ್ಧೂರಿ ಆರತಕ್ಷತೆ: ಇಂದು ಟಾಪ್ ಹುಡುಗಿ ಕಲ್ಯಾಣ
ಮೊನ್ನೆಯಿಂದ ಅದಿತಿ-ಯಶಸ್ ವಿವಾಹ ಪೂರ್ವ ಕಾರ್ಯಕ್ರಮ ಆರಂಭವಾಗಿದೆ. ನಿನ್ನೆ ಅರಮನೆ ಮೈದಾನದ ಸಭಾಂಗಣದಲ್ಲಿ ಆರತಕ್ಷತೆ ನಡೆದಿದ್ದು ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸೋಮಣ್ಣ, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಿನಿ, ರಾಜಕೀಯ ಗಣ್ಯರು ಅದಿತಿ-ಯಶಸ್ ಜೋಡಿಗೆ ಶುಭ ಕೋರಿದ್ದಾರೆ.
ಇಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಇಂದು ಬೆಳಿಗ್ಗೆ 9.30 ರಿಂದ 10.30 ರೊಳಗಿನ ಮುಹೂರ್ತದಲ್ಲಿ ಅದಿತಿ-ಯಶಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಂದೂ ಕೂಡಾ ಅನೇಕ ಸೆಲೆಬ್ರಿಟಿಗಳು ಆಗಮಿಸುವ ನಿರೀಕ್ಷೆಯಿದೆ.