ಶಾರುಖ್ ಆಯ್ತು ಇದೀಗ ಅಕ್ಷಯ್ ಕುಮಾರ್ ಜೊತೆ ಅಭಿನಯಿಸ್ತಾರೆ ಆಲಿಯಾ

ಬುಧವಾರ, 10 ಫೆಬ್ರವರಿ 2016 (11:01 IST)
ಬಾಲಿವುಡ್‌ನ ಅತ್ಯಂತ ಲಕ್ಕಿ ಹಾಗೂ ಕ್ಯೂಟ್ ಸ್ಟಾರ್ ಅಂದ್ರೆ ಅದು ಆಲಿಯಾ ಭಟ್. ಬಾಲಿವುಡ್ ಅಂಗಳಕ್ಕೆ ಬಂದ ಕೆಲವೇ ವರ್ಷಗಳಲ್ಲಿ  ಉತ್ತವ ಅವಕಾಶಗಳು ಹಾಗೇ ಉತ್ತಮವಾದ ಸಿನಿಮಾಗಳಲ್ಲಿ ಅಭಿನಯಿ ಸೈ ಅನ್ನಿಸಿಕೊಂಡವರು ಆಲಿಯಾ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ತನಗಿಂತ ವಯಸ್ಸಿನಲ್ಲಿ ಎರಡು ಪಟ್ಟು ಹಿರಿಯವರಾದ ನಟ ಶಾರುಖ್ ಖಾನ್ ಅವರೊಂದಿಗೆ ನಟಿಸುವ ಅವಕಾಶ ಪಡೆದುಕೊಂಡಿರುವ ಆಲಿಯಾ ಈ ಮೂಲಕವೇ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದರು. ಹೀಗಿರುವಾಗಲೇ ಆಲಿಯಾ ಅವರಿಗೆ ಮತ್ತೊಂದು ಸುವರ್ಣ ಅವಕಾಶ ಒಲಿದು ಬಂದಿದೆ. ಅದು ಮತ್ತೊಬ್ಬ ಮಹಾನ್ ನಟನೊಂದಿಗೆ ಅಭಿನಯಿಸುವ ಅವಕಾಶ.ಅದು ಬೇರಾರು ಅಲ್ಲ. ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್.
 
ಈಗಾಗಲೇ ಆಲಿಯಾ ಗೌರಿ ಶಿಂಧೆ ನಿರ್ದೇಶನ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ ಶ್ರೀರಾಮ್ ರಾಘವನ್ ನಿರ್ದೇಶಿಸುತ್ತಿರುವ ಸಿನಿಮಾವೊಂದರಲ್ಲಿ ಆಲಿಯಾ ಅಕ್ಷಯ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.ಅಂದ್ಹಾಗೆ ಇದು 18 ವರ್ಷದ ಯುವತಿಯೊಬ್ಬಳು 40 ವರ್ಷದ ವ್ಯಕ್ತಿಯೊಬ್ಬನ ಜೊತೆ ಪ್ರೀತಿಯಲ್ಲಿ ಬೀಳೋ ಕಥೆಯಂತೆ. ಹಾಗಾಗಿ ಆಲಿಯಾ ಹಾಗೂ ಅಕ್ಕಿ ಕಾಂಬಿನೇಷನ್ ಹೇಗಿರುತ್ತೆ ಅಂತಾ ನೋಡೋ ಕಾತುರ ಅಭಿಮಾನಿಗಳಲ್ಲಿ ಸಾಕಷ್ಟಿದೆ.

ವೆಬ್ದುನಿಯಾವನ್ನು ಓದಿ