ವಿಜಯವಾಡ: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಹೋದರ ಮೆಗಾಸ್ಟಾರ್ ಚಿರಂಜೀವಿ ಅವರ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದಲ್ಲಿ ಬುಧವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ತೆಲುಗು ರಾಜಕೀಯ ಮುಖಂಡರು ಮತ್ತು ಸಿನಿ ತಾರೆಯರು ಭಾಗವಹಿಸಿದ್ದರು. ಇನ್ನೂ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪವನ್ ಕಲ್ಯಾಣ್ ಅವರು ವೇದಿಕೆಯಲ್ಲಿದ್ದ ಮುಖಂಡರಿಗೆ ನಮಸ್ಕರಿಸಿದರು.
ಇನ್ನೂ ಅಣ್ಣ ಚಿರಂಜೀವಿ ಬಳಿ ತೆರಳಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವೇಳೆ ಸಹೋದರನನ್ನು ತಬ್ಬಿಕೊಂಡು ಅಭಿನಂದಿಸಿ ಚಿರಂಜೀವಿ ಭಾವುಕರಾದರು. ಸಾಮಾಜಿಕ ಜಾಲತಾಣದಲ್ಲಿ ಅಣ್ಣ ತಮ್ಮರ ಬಾಂಧವ್ಯ ನೋಡಿದ ನೆಟ್ಟಿಗರು ಯಾರಾ ದೃಷ್ಟಿಯೂ ಬೀಳದಿರಲಿ ಎಂದು ಆಶಿಸಿದರು.
ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಕೈ ಹಿಡಿದು ಕ್ಯಾಮೆರಾಗೆ ಫೋಸ್ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ನಟ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್, ನಟ ಎನ್ ಬಾಲಕೃಷ್ಣ ಸೇರಿದಂತೆ ಪವನ್ ಕಲ್ಯಾಣ್ ಸಹೋದರ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿದರು.
ಚಿರಂಜೀವಿ ಅವರ ಪುತ್ರ ಮತ್ತು ನಾಯಕ ನಟ ರಾಮ್ ಚರಣ್, ಪವನ್ ಕಲ್ಯಾಣ್ ಅವರ ಪತ್ನಿ ಕೊನಿಡೇಲಾ ಲೆಜ್ನೇವಾ, ಮಗ ಅಖಿರಾ, ಸಹೋದರ ಮತ್ತು ನಟ ನಾಗಬಾಬು ಅವರ ಪುತ್ರಿ ಮತ್ತು ನಟ ನಿಹಾರಿಕಾ, ಸೋದರಳಿಯ ಮತ್ತು ನಟ ಸಾಯಿ ಧರಂ ತೇಜ್ ಸಹ ಉಪಸ್ಥಿತರಿದ್ದರು.