ಸದ್ದಿಲ್ಲದೇ ಸಿನಿಮಾ ಒಪ್ಪಿಕೊಂಡ ನಟ ಅಜೇಯ್ ರಾವ್

ಮಂಗಳವಾರ, 16 ಏಪ್ರಿಲ್ 2019 (07:31 IST)
ಬೆಂಗಳೂರು: ತಾಯಿಗೆ ತಕ್ಕ ಮಗ ಸಿನಿಮಾವಾದ ಮೇಲೆ ನಟ ಅಜೇಯ್ ರಾವ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿರುವ ಬಗ್ಗೆ  ಅಜೇಯ್ ರಾವ್ ಮಾಹಿತಿ ನೀಡಿದ್ದಾರೆ. ಆದರೆ ಯಾವ ಸಿನಿಮಾ, ಯಾರು ನಿರ್ದೇಶಕರು ಎಂಬಿತ್ಯಾದಿ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದೇನೆ. ಉಳಿದ ವಿವರಗಳನ್ನು ಸದ್ಯದಲ್ಲೇ ನೀಡಲಿದ್ದೇನೆ ಎಂದು ಅಜೇಯ್ ರಾವ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಮಗಳು ಹುಟ್ಟಿದ ಖುಷಿಯಲ್ಲಿರುವ ಅಜೇಯ್ ಮಗುವಿನ ಪಾಲನೆಯಲ್ಲೇ ಬ್ಯುಸಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ