ಬಾದ್ಷಾ ಹೋ ಮೂಲಕ ತೆರೆ ಹಂಚಿಕೊಳ್ಳುತ್ತಿರುವ ಶ್ರುತಿ ಹಾಸನ್ -ಅಜಯ್ ದೇವಗನ್

ಶನಿವಾರ, 25 ಜುಲೈ 2015 (10:15 IST)
ಶ್ರುತಿ ಹಾಸನ್ ಕಾಲಿವುಡ್, ತಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗಗಳಲ್ಲಿ ಯಶಸ್ಸಿನ ಹಾದಿ ತುಳಿಯುತ್ತಿರುವ ನಟಿ. ಆಕೆಯು ಈಗ ಬಾಲಿವುಡ್ ನಲ್ಲಿ ಅನೇಕ ಅವಕಾಶಗಳನ್ನು ತನ್ನದಾಗಿಸಿ ಕೊಳ್ಳುತ್ತಿದ್ದಾರೆ. ಅವರಿಗೆ ಈಗ ಅಜಯ್ ದೇವಗನ್ ಅವರ ಜೊತೆ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಪ್ರಸ್ತುತ ಆಕೆ ಅಭಿನಯದ  ವೆಲ್ಕಂ ಬ್ಯಾಕ್, ಶ್ರೀಮಂತುಡು, ಪುಲಿ ಚಿತ್ರಗಳು ಬಿಡುಗಡೆಯ ಹಾದಿಯಲ್ಲಿದೆ. 
ಈಗ ಅಜಯ್ ಅವರ ಜೊತೆ ಬಾದ್ಷಾ ಹೊ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಆಕ್ಷನ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಶ್ರುತಿ ಮತ್ತು ಮತ್ತೊಬ್ಬ ಹೀರೋಯಿನ್ ಇದ್ದು, ಶ್ರುತಿ ಪಾತ್ರ ಹೆಚ್ಚು ಪ್ರಾಮುಖ್ಯತೆ ಗಳಿಸಿಕೊಂಡಿದೆಯಂತೆ. ಈ ಚಿತ್ರವನ್ನು ಮಿಲನ್ ಲುಥಾರಿಯಾ ಅವರು ನಿರ್ದೇಶನದ ಚಿತ್ರವಾಗಿದೆ. ಸಾಮಾನ್ಯವಾಗಿ ಮಿಲನ್ ಅವರ ನಿರ್ದೇಶನದ ಯಾವುದೇ ಚಿತ್ರವಾಗಲಿ ನಾಯಕ ಮತ್ತು ನಾಯಕಿಯರಿಗೆ ಮಾತ್ರವಲ್ಲ ಪ್ರತಿಯೊಂದು ಪಾತ್ರಕ್ಕೂ ಹೆಚ್ಚು ಮಹತ್ವ ಇರುವಂತೆ ಮಾಡಲಾಗುತ್ತದೆ. ಡರ್ಟಿ ಪಿಕ್ಚರ್ಸ್, ಎ ಟೈಮ್ ಇನ್ ಬಾಂಬೆ ಇದಕ್ಕೆ ಸೂಕ್ತ ಉದಾಹರಣೆ. ಈ ಚಿತ್ರವನ್ನು ಖುದ್ದು ಮಿಲನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಇವರ ಜೊತೆ ಮತ್ತೊಬ್ಬರು ಕೈ ಜೋಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ