ಅಜಯ್ ದೇವಗನ್-ಕಾಜೋಲ್ ಒಟ್ಟಿಗೆ ನಟನೆ ?

ಮಂಗಳವಾರ, 28 ಜುಲೈ 2015 (10:24 IST)
ತನ್ನ  ಪತ್ನಿ ಕಾಜೋಲ್ ಅವರ ಜೊತೆ ಚಿತ್ರ ದಲ್ಲಿ ನಟಿಸುವ ಬಗ್ಗೆ ಆಲೋಚನೆ ಮಾಡಿ ಅದನ್ನು ಕಾರ್ಯಗತ ಮಾಡಲು ಸಿದ್ಧತೆ ನಡೆಸಿದ್ದಾರೆ ಅಜಯ್ ದೇವಗನ್.  ಅವರ ಅಭಿನಯದ ದೃಶ್ಯಂ ಬಿಡುಗಡೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಈ ಸೂಪರ್ ಸ್ಟಾರ್ ಅದರ ಜೊತೆ ತಮ್ಮ ಹೋಂ ಪ್ರೊಡಕ್ಷನ್ ನಲ್ಲಿ ಸಿವಾಯ್  ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಅವರ ಬಹು ನಿರೀಕ್ಷಿತ ಚಿತ್ರವಾಗಿದೆ.  ಈ ಚಿತ್ರವನ್ನು ರಾಮ್ ಮಾಧವಾನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಸ್ತುತ  ರಾಮ್ ಅವರು ನೀರಜಾ ಸಿನಿಮಾದಲ್ಲಿ  ಬ್ಯುಸಿಯಾಗಿದ್ದಾರೆ. ಆದ ಕಾರಣ ಆ ಪ್ರಾಜಕ್ಟ್ ಮುಗಿದ ಬಳಿಕ ಈ ತಾರ ದಂಪತಿಗಳ ಸಿನಿಮಾವನ್ನು ಅವರು ನಿರ್ದೇಶನ ಮಾಡಲಿದ್ದಾರೆ.
ಕಾಜೋಲ್ ಅಭಿನಯದ ಚಿತ್ರ ನಿರ್ಮಾಣ ಮಾಡಲು ಸಹಿತ ಸಿದ್ಧತೆ ನಡೆಸಿದ್ದು ಅದಕ್ಕಿನ್ನೂ ಹೆಸರು ನಿಗದಿ ಆಗಿಲ್ಲ. ಇವೆಲ್ಲದರ ನಡುವೆ ಈಗ ಕಾಜಲ್ ಮತ್ತೆ ಬಣ್ಣ ಹಚ್ಚಿ ಶಾರೂಖ್ ಖಾನ್ ಅವರ ಜೊತೆ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ  ನಿರ್ದೇಶನದ ಈ ಚಿತ್ರ ದಿಲ್ವಾಲೆ. ಕಾಜಲ್ ಅಭಿನಯದ ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ಕೆಲಸ ಆರಂಭ ಮಾಡಲಿದೆ. ಇನ್ನು ಹೆಸರು ನಿಗದಿಯಾಗಿಲ್ಲ. ಈ ಚಿತ್ರದಲ್ಲಿ ಅಜಯ್ ಅವರು ತಮ್ಮ ಪತ್ನಿ ಜೊತೆ ನಟಿಸುವ ಬಗ್ಗೆ ಇನ್ನು ಸ್ಪಷ್ಟನೆ ಸಿಗದೇ ಇದ್ದರೂ ಸಹಿತ ಅವರು ನಟಿಸಬಹುದೆನ್ನುವ ನಂಬಿಕೆ ಹಾಗೂ ನಟಿಸಲಿ ಎನ್ನುವ  ಆಶಯ ಹೊಂದಿದ್ದಾರೆ ಅವರ ಅಭಿಮಾನಿಗಳು.  

ವೆಬ್ದುನಿಯಾವನ್ನು ಓದಿ