ಅಜಯ್ ಲವ್ ಸ್ಟೋರಿ ಈಗ ಮ್ಯಾರೇಜಿಗೆ ಬಂದು ತಲುಪಿದೆ

ಶುಕ್ರವಾರ, 19 ಡಿಸೆಂಬರ್ 2014 (09:59 IST)
ಕನ್ನಡ ಚಿತ್ರರಂಗದ ಚಾಕೊಲೆಟ್ ಹೀರೋ ಕೃಷ್ಣನ ಮದುವೆ, ಮ್ಯಾರೇಜ್ ಹೀಗೆ ಹತ್ತು ಹಲವಾರು ಹೆಸರಿನ ಮದುವೆ  ಹೆಸರಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹೀರೋ ತಮ್ಮ ಕೆರಿಯರ್ ಆರಂಭ ಮಾಡಿದ್ದು ಕನ್ನಡದ ಗ್ಲಾಮರ್ ನಟಿ ರಮ್ಯ ಜೊತೆ. ಎಕ್ಸ್ಕ್ಯೂಸ್ ಮಿ ಅವರ ಮೊಟ್ಟ ಮೊದಲ ಕನ್ನಡ ಚಿತ್ರ.ಯಶಸ್ವಿ ಚಿತ್ರಗಳ ಸಾಲಿಗೆ ಸೇರಿರುವ ಆ ಚಿತ್ರ ಅಜಯ್ ಗೆ ಕನ್ನಡ ಚಿತ್ರರಂಗದಲ್ಲಿ ಒಂದು ಒಳ್ಳೆಯ ಸ್ಥಾನ ನೀಡಿತ್ತು. 
ಈಗ ಅವೆಲ್ಲ ಹಳೆಯ ಸಂಗತಿ. ಅಜಯ್ ಕೃಷ್ಣ ರಾವ್ ಇನ್ನು ಈಗ ತಮ್ಮನ್ನು ಗುರುತಿಸಿಕೊಳ್ಳುತ್ತಿರುವ ಅಜಯ್ ಅವರು ಈ ವಾರ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಈ ಮೊದಲು ತಿಳಿಸಿದ್ದೆವು. ಅದರ ಮುಂದಿನ ಭಾಗ ಇಲ್ಲಿದೆ. ಅಜಯ್ ಸ್ವಪ್ನ ಜೊತೆ ನಿನ್ನೆ ಹೊಸ ಪೇಟೆಯ ಹುಲಿಗೆಮ್ಮ ದೇಗುಲದಲ್ಲಿ ಸರಳವಾಗಿ ಮದುವೆ ಆದರು. ಈ ದೇಗುಲ ಹೊಸ ಪೇಟೆಯಿಂದ 15  ಕಿಲೋ ಮೀಟರ್ ಗಳಷ್ಟು ದೂರ ಇದೆ. 
 
ಇಷ್ಟುದಿನ ಸಿನಿಮಾಗಳಲ್ಲಿ ಮದುವೆ ಆಗುತ್ತಿದ್ದ ಈ ಹೀರೋ ನಿನ್ನೆ ವೈವಾಹಿಕ  ಜೀವನಕ್ಕೆ ಅಡಿ ಇಟ್ಟಿದ್ದಾರೆ. ಸ್ವಪ್ನ ಹೊಸಪೇಟೆಯ ಹುಡುಗಿಯಾಗಿದ್ದು ಈಗ ಅಜಯ್ ಬಾಳ ಸಂಗಾತಿ ಆಗಿದ್ದಾರೆ. ಕೃಷ್ಣನ ಲವ್ ಸ್ಟೋರಿ ಈಗ ಅರೆಂಜ್ ಮ್ಯಾರೇಜ್ ಆಗಿದ್ದು ಕೃಷ್ಣ ಮ್ಯಾರೇಜ್ ನಂತೆ ಪೂರ್ಣ ಆಗಿದೆ. ಈ ನವ ಜೋಡಿಯನ್ನು ಹಾರೈಸಲು ಸಿನಿಮಾ ಚಿತ್ರರಂಗದ ನಿರ್ದೇಶಕ ಶಶಾಂಕ್ , ಸಾಹಸ ನಿರ್ದೇಶಕ ರವಿ ವರ್ಮ ಸೇರಿದಂತೆ ಇನ್ನು ಹಲವರು , ಜೊತೆಗೆ ಅವರ ಕುಟುಂಬದ ಸದಸ್ಯರು -ಸ್ನೇಹಿತರ ಬಳಗವು ಹಾಜರಿದ್ದರು. ವೆಬ್ ದುನಿಯಾ ಕಡೆಯಿಂದಲೂ  ವೈವಾಹಿಕ ಬದುಕಿಗೆ ಅಡಿ ಇಟ್ಟ  ಈ ನವಜೋಡಿಗೆ ಹೃದಯಪೂರ್ವಕ ಹಾರೈಕೆಗಳು. ಹ್ಯಾಪಿ ಮ್ಯಾರಿಡ್ ಲೈಫ್ ಅಜಯ್-ಸ್ವಪ್ನ .

ವೆಬ್ದುನಿಯಾವನ್ನು ಓದಿ