ಕನ್ನಡದ ಹಿರಿಯ ಹಾಸ್ಯ ನಟ ಅಕ್ಕಿ ಚೆನ್ನಬಸಪ್ಪ ಇನ್ನಿಲ್ಲ!

ಬುಧವಾರ, 16 ಮೇ 2018 (06:50 IST)
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಹಿರಿಯ ನಟ ಅಕ್ಕಿ ಚೆನ್ನಬಸಪ್ಪ ಇಂದು (ಮಂಗಳವಾರ) ವಿಧಿವಶರಾಗಿದ್ದಾರೆ.

90 ವರ್ಷ ವಯಸ್ಸಿನ ಅಕ್ಕಿ ಚೆನ್ನಬಸಪ್ಪ ಅವರನ್ನು ನೋಡಿಕೊಳ್ಳಲು ಅವರ ಕುಟುಂಬದವರು ಯಾರು ಇಲ್ಲದ ಕಾರಣ ಕೆಂಗೇರಿ ಸಮೀಪವಿರುವ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದು, ಇಂದು ಅನಾಥಾಶ್ರಮದಲ್ಲೇ ಕೊನೆಯುಸಿರೆಳಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಅಕ್ಕಿಚೆನ್ನಬಸಪ್ಪ ಅವರ ಸಾವಿಗೆ ಕನ್ನಡ ಸಿನಿಮಾರಂಗ ಕಂಬನಿ ಮಿಡಿದಿದೆ.


ನಾಳೆ ಸುಮಾರು 12 ಗಂಟೆ ವೇಳೆಗೆ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಕೆಂಗೇರಿ ಸಮೀಪವೇ ಅಂತ್ಯಕ್ರಿಯೆ ಮಾಡುವುದಾಗಿ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ