34 ವರ್ಷದ ಬಳಿಕ ಮತ್ತೆ ಪುನೀತ್ ಸಿನಿಮಾದಲ್ಲಿ ನಟಿಸಲಿರುವ ಕನ್ನಡದ ಹಿರಿಯ ನಟಿ ಯಾರು ಗೊತ್ತಾ..?

ಬುಧವಾರ, 16 ಮೇ 2018 (06:39 IST)
ಬೆಂಗಳೂರು : 34 ವರ್ಷದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಕನ್ನಡದ ಹಿರಿಯ ನಟಿಯೊಬ್ಬರು ಇದೀಗ ಮತ್ತೆ ಪುನೀತ್ ಸಿನಿಮಾದಲ್ಲಿ ನಟಿಸಲಿದ್ದಾರೆ.


ಹೌದು. ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ಅವರು ಇದೀಗ  ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಡಾ ರಾಜ್ ಕುಮಾರ್ ಅವರು ಅಭಿನಯಿಸಿದ್ದ 'ಯಾರಿವನು' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಅಭಿನಯ ಮಾಡಿದ್ದು, ಅವರ ತಾಯಿಯ ಪಾತ್ರದಲ್ಲಿ ಸರೋಜದೇವಿ ನಟಿಸಿದ್ದರು. ಇದೀಗ 34 ವರ್ಷದ ಬಳಿಕ ಅವರು ಈ ಚಿತ್ರದ ಮೂಲಕ ಪುನೀತ್  ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.


'ನಟ ಸಾರ್ವಭೌಮ' ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ನಟಿ ರಚಿತಾ ರಾಮ್ ಅವರು ಪುನೀತ್  ಜೊತೆಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ