ಮೌನ ಮುರಿದ ನಟ ಅಕ್ಷಯ್ ಕುಮಾರ್ : ಡ್ರಗ್ ಲಿಂಕ್ ಬಗ್ಗೆ ಹೊಸ ಬಾಂಬ್
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಒಂದೆಡೆ ನೆಪೋಟಿಸಂ ಮತ್ತೊಂದೆಡೆ ಡ್ರಗ್ ಲಿಂಕ್.
ಬಾಲಿವುಡ್ ಜಾಗತಿಕ ವೇದಿಕೆಗಳಲ್ಲಿ ಭಾರತದ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮೂಲಗಳಲ್ಲಿ ಒಂದಾಗಿದೆ ಎಂದಿರುವ ನಟ ಅಕ್ಷಯ್ ಕುಮಾರ್, ಇತರ ಯಾವುದೇ ಉದ್ಯಮದಂತೆಯೇ ಬಾಲಿವುಡ್‌ನಲ್ಲಿ ಮಾದಕವಸ್ತು ಬಳಕೆಯಂತಹ ಸಮಸ್ಯೆಗಳು ಇದ್ದರೂ, ಇಡೀ ಚಲನಚಿತ್ರೋದ್ಯಮವನ್ನು ಒಂದೇ ರೀತಿ ದೂಷಿಸುವುದು ಸರಿಯಲ್ಲ ಎಂದಿದ್ದಾರೆ.