ಎರಡನೇ ಹಂತಕ್ಕೆ ಕಾಲಿಟ್ಟ ಬಿಗ್ ಬಾಸ್ ಅಕುಲ್ ಬಾಲಾಜಿ ಲವ್ ಆನ್ ಎನ್ ಎಚ್ 4

ಶುಕ್ರವಾರ, 17 ಅಕ್ಟೋಬರ್ 2014 (12:01 IST)
ಬಿಗ್ ಬಾಸ್ 2 ವಿಜೇತ ಅಕುಲ್ ಬಾಲಾಜಿ ಅವರು ಅಭಿನಯಿಸುತ್ತಿರುವ ಚಿತ್ರ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ನಾಯಕನಿಲ್ಲದೇ ಶೂಟಿಂಗ್ ಮಾಡಿಸಿಕೊಳ್ಳುತ್ತಿತು ಚಿತ್ರ. ಆದರೆ ಮತ್ತೆ ಚಿತ್ರದ ಶೂಟಿಂಗ್ ಕೆಲಸ ಆರಂಭ ಆಗಿದೆ. ಸ್ವಲ್ಪ ವಿರಾಮದ ಬಳಿಕ ಇದರ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. 
 
ನಿರ್ದೇಶಕ ಪಿ ಶ್ರೀನಾಥ್ ಅವರ ಲವ್ ಆನ್ ಎನ್ ಎಚ್ 4 ಚಿತ್ರಕ್ಕೆ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ.ಈ ಚಿತ್ರದಲ್ಲಿ ತಿಲಕ್, ಮಾಧುರಿ,  ಅಕುಲ್  ಅವರ ಜೊತೆಯಲ್ಲಿ ನಟಿಸಿದ್ದಾರೆ. ತಿಲಕ್ ಮತ್ತೊಬ್ಬ ನಾಯಕ. ನರ್ಸ್ ಜಯಲಕ್ಷ್ಮಿ ಅವರ ಅಭಿನಯದಲ್ಲಿ ಕೋರ್ಟ್ ಸನ್ನಿವೇಶದ ಚಿತ್ರೀಕರಣ ನಡೆಯಿತು. 
 
ನ್ಯಾಯಾಧಿಪತಿಯ ಪಾತ್ರದಲ್ಲಿ ಜಯಲಕ್ಷ್ಮಿ  ಕಾಣಿಸಿಕೊಂಡಿದ್ದಾರೆ.ಬಿರಾದಾರ್, ಶ್ರೀಕಾಂತ್, ಮಂಗಳಮುಖಿಯರು ಮತ್ತು ಮೂಗು ಸುರೇಶ ಅವರು ಹಾಸ್ಯ ಸನ್ನಿವೇಶದ ಚಿತ್ರೀಕರಣದಲ್ಲಿ  ಇದ್ದಾರೆ.ಪತ್ರಕರ್ತ ಪಿ ಶ್ರೀನಾಥ್ ಅವರೇ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 
 
ನಿರಂಜನ್ ಬಾಬು ಅವರ ಛಾಯಾಗ್ರಹಣ,ಪ್ರಕಾಶ್ ಅವರ ಸಂಕಲನ,ಶ್ರೀನಾಥ್ ಅವರ ಗೀತರಚನೆ ಮತ್ತು  ಸಂಗೀತ ಚಿತ್ರಕ್ಕೆ ಇದೆ. ಗಣೇಶ್,ಇಮ್ರಾನ್ ಅವರ ನೃತ್ಯ ನಿರ್ದೇಶನ,ಶ್ರೀನಿವಾಸ್ ಅವರ ಕಲಾ  ನಿರ್ದೇಶನ ಹೊಂದಿದೆ ಈ ಚಿತ್ರ.ತಿಲಕ್, ಅಕುಲ್ ಅಲ್ಲದೆ ಚಿತ್ರದಲ್ಲಿ ಮಂಡ್ಯ ರಮೇಶ್, ಬುಲೆಟ್ ಪ್ರಕಾಶ್, ಬ್ಯಾಂಕ್ ಜನಾರ್ದನ್, ರಿಶಿಕುಮಾರ್ ಸ್ವಾಮಿ ಮುಂತಾದವರಿದ್ದಾರೆ. 
 

ವೆಬ್ದುನಿಯಾವನ್ನು ಓದಿ