ಶಾಂದಾರ್ ಸಿನಿಮಾಕ್ಕೆ ಆಲಿಯಾ ಮೊದಲ ಆಯ್ಕೆಯಲ್ವಾ?

ಶನಿವಾರ, 3 ಅಕ್ಟೋಬರ್ 2015 (11:15 IST)
ಆಲಿಯಾ ಭಟ್ ಹಾಗೂ ಶಾಹೀದ್ ಕಪೂರ್ ಅಭಿನಯದ ಶಾಂದಾರ್ ಸಿನಿಮಾ ಪ್ರೇಕ್ಷಕರೆದುರಿಗೆ ಬರಲು ದಿನಗಣನೆ ಆರಂಭವಾಗಿದೆ. ಇಬ್ಬರು ಮುದ್ದಾದ ನಟ ಹಾಗೂ ನಟಿಯರ ಅಭಿನಯ ನೋಡೋದಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದ್ರೆ ಶಾಂದಾರ್ ಸಿನಿಮಾಕ್ಕೆ ಆಯ್ಕೆಯಾಗಿದ್ದು ಹೇಗೆ ಅನ್ನೋದೇ ಕುತೂಹಲಕಾರಿಯಾಗಿದೆ. ಅಂದ್ಹಾಗೆ ಚಿತ್ರಕ್ಕೆ ಆಲಿಯಾ ಮೊದಲ ಆಯ್ಕೆಯಲ್ಲವಂತೆ.
ಆಲಿಯಾಳನ್ನು ಸಿನಿಮಾಗೇ ಆಯ್ಕೆ ಮಾಡುವ ಮೊದಲು ದೀಪಿಕಾ ಅವರ ಜೊತೆ ಈ ಪಾತ್ರ  ನಿರ್ವಹಿಸುವುದಕ್ಕಾಗಿ  ಮಾತುಕತೆ ನಡೆಸಲಾಗಿತ್ತಂತೆ. ಆದ್ರೆ ದೀಪಿಕಾ ಸಿನಿಮಾವನ್ನು ಕಾರಣಾಂತರಗಳಿಂದ ಒಪ್ಪಿಕೊಳ್ಳಲಿಲ್ಲವಂತೆ. ಹಾಗಾಗಿ ಸಿನಿಮಾಗೆ ಆಲಿಯಾ ಅವರನ್ನು ಆಯ್ಕೆ ಮಾಡಲಿಯಾತಂತೆ. ಹೀಗಾಗಿ ಈ ಮುದ್ದಾದ ಜೋಡಿಯನ್ನು ತೆರೆಯ ಮೇಲೆ ನೋಡೋ ಅವಕಾಸ ಅಬಿಮಾನಿಗಳಿಗೆ ಸಿಗುತ್ತಿದೆ.
 
ಶಾಂದಾರ್ ಸಿನಿಮಾವನ್ನು ವಿಕಾಸ್ ಬಹಲ್ ನಿರ್ದೇಶಿಸಿದ್ದು, ಫ್ಯಾಂಟಮ್ ಸಿನಿಮಾ ತಂಡವೇ ಇದರ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದೆ. ಅಕ್ಟೋಬರ್ 22 ರಂದು ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ