ನಾನು ಬಾಲಿವುಡ್ ನಟಿ ಮಣಿಯರಿಗೆ ನುಂಗಲಾರದ ತುತ್ತು: ಕಂಗನಾ

ಬುಧವಾರ, 8 ಜುಲೈ 2015 (10:21 IST)
ಬಾಲಿವುಡ್ ನಟಿಯರಿಗೆ ಕರ್ಲಿ ಹೇರ್ ಸುಂದರಿ ಕಂಗನಾ ರನೌಟ್ ಕಂಡರೆ ಅಸೂಯೆಯಂತೆ. ಹಾಗಂತ ಖುದ್ದೂ ಆಕೆ ಹೇಳಿಕೊಂಡಿದ್ದಾಳೆ. ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ನಟಿಸಿ ತನ್ನ ಪ್ರತಿಭೆ ತೋರಿರುವ ಈ ಸುಂದರಿ ಗ್ಯಾಂಗ್ ಸ್ಟಾರ್, ಮೆಟ್ರೋ, ಫ್ಯಾಶನ್, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದಂಥ ಚಿತ್ರಗಳ ಮೂಲಕ ತನಗೊಂದು ಸ್ಥಾನವನ್ನು ಬಾಲಿವುಡ್ ಚಿತ್ರರಂಗದಲ್ಲಿ ಗಳಿಸಿದ್ದು ಸುಳ್ಳಲ್ಲ. ಆದರೆ ಈಗ ಆಕೆಯು ಹಣಕಾಸಿನ ವಿಷಯದಲ್ಲೂ ಗೆಲುವಿನ ಕುದುರೆ ಆಗಿದ್ದಾರೆ. ಆಕೆ ಹೇಳುವ ಪ್ರಕಾರ ಬಾಲಿವುಡ್ ಬೇರೆ ಕಲಾವಿದೆಯರಿಗೆ ಆಕೆಯನ್ನು ಕಂಡ್ರೆ ಅಸೂಯೆಯಂತೆ. ಕೆಲವು ನಟಿಯರಿಗೆ ನನ್ನ ಬಗ್ಗೆ ಅಸೂಯೆ ಇದೆ. ಅವರ ಹೆಸರನ್ನು ನಾನು ಸ್ವಲ್ಪ ದಿನಗಳ ಬಳಿಕ ತಿಳಿಸುತ್ತೇನೆ ಎಂದಿದ್ದಾರೆ ಈಕೆ. ತನು ವೆಡ್ಸ್ ಮನು ಚಿತ್ರಕ್ಕೆ ದೊರೆತ ಜನರ ವಿಶ್ವಾಸದಿಂದ ಸಿಕ್ಕಾಪಟ್ಟೆ ಖುಷಿಯಾಗಿದೆ ಈ ಸುಂದರಿಗೆ. 
ಹಣದ ಬಗ್ಗೆ ಆಕೆ ಹೊಂದಿರುವ ವಿಚಾರಧಾರೆ ಹೀಗಿದೆ. ಹಣದಿಂದ ಸಹಾಯ ಆಗುತ್ತದೆ. ನಾನು ಸ್ವತಂತ್ರಳು, ಕೆಲಸ ಮಾಡುತ್ತಿದ್ದೇನೆ, ನನ್ನ ಉತ್ತಮ ಜೀವನಕ್ಕೆ, ನಮ್ಮ ಮನೆಯವರಿಗೆ ಬೆನ್ನೆಲುಬಾಗಲು ಹಣ ಸಹಾಯಕಾರಿ . ಅದು ನನ್ನನ್ನು ಖುಷಿಯಾಗಿದುತ್ತದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಆಕೆ ಯಾವುದಂದರೆ ಅದರ ಜಾಹೀರಾತಿನಲ್ಲಿ ನಟಿಸಲು ಇಷ್ಟ ಪಡಲ್ಲವಂತೆ. ಅದು ಸಹ ಕಂಗನ ಅವರಿಗೆ ಇಷ್ಟವಿಲ್ಲದ ಕೆಲಸವಂತೆ. ಹೀಗೆ ಕಂಗನ ಅಡ್ಡಗೋಡೆ ಮೇಲೆ ದೀಪ ಇಟ್ಟಂಗೆ ಆಕೆಯನ್ನು ಕಂಡು ಅಸೂಯೆ ಪಡುವ ತಾರಮಣಿಯರ ಬಗ್ಗೆ ಹೇಳಿದ್ದಾರೆ. ಹೇಳಿ ಕಂಗನ ಯಾರವರು..? ಯಾರವರು.. ಟೆಲ್ ಅಸ್ ಪ್ಲೀಸ್ಸ್!

ವೆಬ್ದುನಿಯಾವನ್ನು ಓದಿ