ಐಶ್ವರ್ಯಾ ಅಭಿನಯಕ್ಕೆ ಪ್ರಶಂಸೆಯ ಸಿರಿಮಳೆ

ಸೋಮವಾರ, 12 ಅಕ್ಟೋಬರ್ 2015 (11:34 IST)
5 ವರ್ಷಗಳ ಬಳಿಕ ನಟಿ ಐಶ್ವರ್ಯಾ ರೈಕಮ್ ಬ್ಯಾಕ್ ಮಾಡಿದ ಜಸ್ಬಾ ಸಿನಿಮಾಕ್ಕೆ ಅಭಿಮಾನಿಗಳು ಫಲ್ ಫಿದಾ ಆಗಿದ್ದಾರೆ. ಐಶ್ ಅಭಿನಯ ಕಂಡ ಆಕೆಯ ಅಭಿಮಾನಿಗಳ ಜೈ ಅನ್ನುತ್ತಿದ್ದಾರೆ.
ಸಿನಿಮಾದಲ್ಲಿ ಒಬ್ಬ ನ್ಯಾಯವಾದಿ ಜೊತೆಗೆ ತಾಯಿಯಾಗಿ ಕಾಣಿಸಿಕೊಂಡಿರುವ ಐಶ್ ಅಭಿನಯಕ್ಕೆ ಈಗಾಗಲೇ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಸಿನಿಮಾದ ಕಥೆ, ಸ್ಕ್ರೀನ್ ಫ್ಲೇ ಇವೆಲ್ಲದ್ದಕ್ಕೂ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಸಿನಿಮಾವೂ ಕ್ಷಣ ಕ್ಷಣವೂ ಕುತೂಹಲವನ್ನು ಹೆಚ್ಚಿಸಿಕೊಂಡೇ ಹೋಗುತ್ತಿದೆ. ಬಾಕ್ಸಾಫೀಸ್ ನಲ್ಲೂ ಸಿನಿಮಾ ಕಮಾಲ್ ಮಾಡುತ್ತಿದೆ. ಈಗಾಗಲೇ ಸಿನಿಮಾ 12.05 ಕೋಟಿ ಗಳಿಕೆ ಮಾಡಿದೆ. ಮೂರೇ ದಿನಗಳಲ್ಲಿ ಇಷ್ಟೊಂದು ಗಳಿಕೆ ಮಾಡಿರೋದನ್ನು ನೋಡಿದ್ರೆ ಸಿನಿಮಾ ಗೆಲ್ಲೋ ಲಕ್ಷಣ ಕಾಣುತ್ತಿದೆ.
 
ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಇರ್ಫಾನ್ ಖಾನ್ ಪ್ರಮುಖ  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಬಾನಾ ಅಜ್ಮಿ ಮತ್ತು ಜ್ಯಾಕಿ ಶ್ರಾಫ್ ಕೂಡ ಸಿನಿಮಾದಲ್ಲಿದ್ದಾರೆ.ಸಂಜಯ್ ಗುಪ್ತಾ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ