ಬಹು ನಿರೀಕ್ಷಿತ 'ಆಲ್ ಈಸ್ ವೆಲ್' ಟ್ರೈಲರ್ ಬಿಡುಗಡೆ

ಶುಕ್ರವಾರ, 3 ಜುಲೈ 2015 (10:20 IST)
ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಆಲ್ ಈಸ್ ವೆಲ್ ಚಿತ್ರದ ಟ್ರೈಲರ್ ಮನೋರಂಜನೆಯ ರಾಜಧಾನಿ ಮುಂಬಯಿನಲ್ಲಿ ನಿನ್ನೆ ರಿಲೀಸ್ ಆಗಿದೆ. ಅಭಿಷೇಕ್ ಬಚ್ಚನ್ , ರಿಷಿ ಕಪೂರ್, ಆಸಿನ್ , ಶಾಹೀದ್ ಕಪೂರ್ ತಾಯಿ ಸುಪ್ರೀಯಾ ಪಾಠಕ್ ಅಭಿನಯಿಸಿರುವ ಈಗಾಗಲೇ ಸಿನಿ ಪ್ರಿಯರ ಎದೆಯಲ್ಲಿ ಕಾತರ ಹೆಚ್ಚಿಸಿದೆ. ಆಲ್ ಈಸ್ ವೆಲ್ ಸಿನಿಮಾ ರೋಡ್ ಜರ್ನಿ ಆಧಾರಿತ ಚಿತ್ರ. ಚಿತ್ರದಲ್ಲಿ ರಿಷಿ ಕಪೂರ್ ಅಭಿಷೇಕ್ ತಂದೆಯಾಗಿ ಕಾಣಿಸಿಕೊಂಡಿದ್ರೆ, ಸುಪ್ರೀಯಾ ಪಾಠಕ್ ಅಭಿಷೇಕ್ ಬಚ್ಚನ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳಿಗೂ ಅವರದ್ದೇ ಆದ ಸಮಸ್ಯೆ ಇರುತ್ತೆ. ಇನ್ನು ರಿಷಿ ಕಪೂರ್ ಸಿನಿಮಾದಲ್ಲಿ ಬೇಕರಿಯೊಂದರ ಓನರ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಚಿತ್ರದಲ್ಲಿ ಜವಬ್ದಾರಿಯುತ ಮಗನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಆಸಿನ್ ಅಭಿಷೇಕ್  ಗೆಳತಿಯಾಗಿ ಕಾಣಿಸಿಕೊಂಡಿದ್ದಾರೆ. ದಬಾಂಗ್ ಗರ್ಲ್ ಸೋನಾಕ್ಷಿ ಕೂಡ ಸಿನಿಮಾದಲ್ಲಿ ಗೆಸ್ಟ್ ಅಫಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಇನ್ನು ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿರುವ ಈ ಸಿನಿಮಾಕ್ಕೆ ಉಮೇಶ್ ಶುಕ್ಲಾ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ತನ್ನ ಟ್ರೈಲರ್ ಮೂಲಕ ಸಿನಿ ಪ್ರಿಯರ ದಿಲ್ ಕಾದಿರುವ ಈ ಫ್ಯಾಮಿಲಿ ಡ್ರಾಮಾ ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ 21 ರಂದು ಪ್ರೇಕ್ಷರೆದುರು ಪ್ರತ್ಯಕ್ಷವಾಗಲಿದೆ.

ವೆಬ್ದುನಿಯಾವನ್ನು ಓದಿ