ಅಲ್ಲು ಅರ್ಜುನ್-ಕೃತಿ ಕರಬಂಧ ಜೋಡಿಯಾಗಿ ನಟನೆ ?!

ಮಂಗಳವಾರ, 30 ಜೂನ್ 2015 (10:21 IST)
ತೆಲುಗು ನಟ ಅಲ್ಲೂ ಅರ್ಜುನ್. ಅವರು ತಮ್ಮ ಅಭಿನಯದ ಜೊತೆಗೆ ತಮ್ಮ ಚಾರ್ಮಿಂಗ್ ಮೂಲಕವೂ ಸಹಿತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ. ಅವರು ಬೇರೆ ಎಲ್ಲ ಕಲಾವಿದರಿಗಿಂತ ಅಧಿಕ ಸಂಖ್ಯೆಯ ಫ್ಯಾನ್ಸ್  ಗಳನ್ನು ತಮ್ಮ ಫೇಸ್ಬುಕ್ ನಲ್ಲಿ ಹೊಂದಿದ್ದಾರೆ. ಅಲ್ಲೂ ಇರುವ ಕಡೆಗೆ ಗೆಲುವು ಇರಲೇ ಬೇಕು ಎನ್ನುವ ಮಾತಿದೆ. ಇತ್ತೀಚೆಗೆ ನಡೆದ ಸಿನಿಮಾ ಪ್ರಶಸ್ತಿಗಳ ಕಾರ್ಯಕ್ರಮಕ್ಕೆ ಬಂದ ಅಲ್ಲೂ ಅವರು ಹೆಚ್ಚು ಗಮನ ನೀಡಿದ್ದು ಮುಂದಿನ ಸಾಲಿನಲ್ಲಿ  ಹೆಣ್ಣುಮಕ್ಕಳ ಜೊತೆ ಕುಳಿತಿದ್ದ  ಕೃತಿ ಕರಬಂಧ ಕಡೆಗೆ. ಕನ್ನಡ , ತೆಲುಗು , ತಮಿಳು ಚಿತ್ರರಂಗಗಳಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿರುವ ಈ ಸೂಪರ್ ರಂಗಿಯನ್ನು ಕಂಡು ಮಾತನಾಡಿಸಲು ಹೋದ ಅಲ್ಲೂ ಅವರು ಅದ್ಭುತವಾಗಿ ಕಾಣುತ್ತಿದ್ದ ಕೃತಿ ಬಳಿ ನೀನು ನೋಡೋಕ್ಕೆ ಹಾಟ್  ಆಗಿದ್ದಿ ಕಣಮ್ಮಿ ಎಂದು ಅಭಿಪ್ರಾಯ ಮೆಚ್ಚುಗೆ ವ್ಯಕ್ತ ಪಡಿಸಿದರು. ಅದನ್ನು ಆಕೆ ಸಹ ತುಂಬಾ ಶಾಂತವಾಗಿ ಸ್ವೀಕರಿಸಿದರು. ಅಲ್ಲೂ ಅವರ ಈ ಅಭಿಪ್ರಾಯಕ್ಕೆ ಕೃತಿ ಎಗರಿ ಜಿಗಿಯಲಿಲ್ಲ ಯಾಕೇಂದ್ರೆ ಈ ರೀತಿಯ ಮೆಚ್ಚುಗೆ ಆಕೆಗೆ ಕಾಮನ್ .
ಆದರೆ ಅರ್ಜುನ್ ವಿಶೇಷವಾಗಿ ಕೃತಿ ಹತ್ತಿರ ಬಂದು ಮೆಚ್ಚುಗೆ ತೋರಿದ್ದು ಅವರಿಬ್ಬರೂ ಮುಂದಿನ ಚಿತ್ರದಲ್ಲಿ ನಟಿಸುವುದರ ಮುನ್ಸೂಚನೆ ಆಗಿದೆ ಎನ್ನುತ್ತಿದ್ದಾರೆ ಟಾಲಿವುಡ್ ಚಿತ್ರಪಂಡಿತರು. ಯಾಕೇಂದ್ರೆ ಈ ಜೋಡಿ ಈವರೆಗೂ ನಟಿಸಿಲ್ಲ. ಈಗ ಒಟ್ಟಿಗೆ ಅಭಿನಯಿಸುವ ಸಾಧ್ಯತೆ ಹೇರಳವಾಗಿದೆ. ಒಟ್ಟಾರೆ ಏನಾಗುತ್ತದೆ ಎನ್ನುವುದು ತಿಳಿಯಲು ಇನ್ನು ಹೆಚ್ಚುಕಾಲ ಅಲ್ಲದೆ ಇದ್ದರೂ ಸ್ವಲ್ಪ ಕಾಲವಾದರೂ ಕಾಯಬೇಕು! 

ವೆಬ್ದುನಿಯಾವನ್ನು ಓದಿ