ಬಾಲಿವುಡ್ ಚಿತ್ರಕ್ಕೆಂದು ಮತ್ತೆ ಬಣ್ಣ ಹಚ್ಚಿದ ಅಮಲಾ ಅಕ್ಕಿನೇನಿ

ಮಂಗಳವಾರ, 16 ಡಿಸೆಂಬರ್ 2014 (11:14 IST)
ಅಂದು ಪುಷ್ಪಕ ವಿಮಾನದಲ್ಲಿ, ಅದಾದ ಬಳಿಕ ಸ್ವಾತಿ ಮುತ್ತಿನ ಮಳೆ ಹನಿಯೋ ಎಂದು ಹಾಡುತ್ತಾ ಕನ್ನಡಕ್ಕೆ  ಬಂದ ನಟಿ ಅಮಲ. ಅದಾದ ಬಳಿಕ ಆಕೆ ಅತಿ ಹೆಚ್ಚು ನಟಿಸಿದ್ದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ. ತೆಲುಗಿನ  ಟಾಪ್ ಹೀರೋ ಅಕ್ಕಿನೇನಿ ನಾಗಾರ್ಜುನ ಅವರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆ ಆಗಿ ಅಖಿಲ್ ಎನ್ನುವ ಮಗನ ತಾಯಿ ಆದ ನಟಿ ಅಮಲಾ. ಅನೇಕ ವರ್ಷಗಳ ಕಾಲ ತನ್ನನ್ನು ಚಿತ್ರರಂಗದಿಂದ ದೂರ ಇಟ್ಟಿದ್ದ ಈ ಚೆಲುವೆ ಈಗ ಮತ್ತೊಮ್ಮೆ ಸಿನಿಮಾಗಳಲ್ಲಿ ನಟಿಸಲು ಬಂದಿದ್ದಾರೆ. 
ಮೋಹಿತ್ ಸೂರಿ ಅವರ ನಿರ್ದೇಶನದ ಹಮಾರಿ ಅಧೂರಿ ಕಹಾನಿ ಎನ್ನುವ ಹೆಸರಿನ ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಈ ಸಂಗತಿಯನ್ನು ಮಹೇಶ್ ಭಟ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ್ ತಿಳಿಸಿದ್ದಾರೆ. ತಮ್ಮ ನಿರ್ಮಾಣದ ಹಮಾರಿ ಅಧೂರಿ ಕಹಾನಿ ಎನ್ನುವ ಪ್ರೇಮಕಥೆಯಲ್ಲಿ ಅಮಲ ಅಕ್ಕಿನೇನಿ  ನಟಿಸುತಿದ್ದಾರೆ ಎಂದು ಹೇಳಿದ್ದಾರೆ ಮಿಸ್ಟರ್ ಭಟ್. 
 
ಇತ್ತೀಚೆಗಷ್ಟೆ  ಬಿಡುಗಡೆ ಆದ ಮನಂ ಚಿತ್ರದಲ್ಲಿ ಡ್ಯಾನ್ಸ್ ಟೀಚರ್ ಆಗಿ ನಟಿಸಿದ್ದ ಅಮಲ ಈಗ ಮತ್ತೆ ತಮ್ಮನ್ನು ಸಿನಿಮಾರಂಗದಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ.ಈ ಬಾಲಿವುಡ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ವಿದ್ಯಾಬಾಲನ್, ರಾಜ್ ಕುಮಾರ್ ರಾವ್ ಜೊತೆ  ಅಮಲ ಅಕ್ಕಿನೇನಿ ನಟಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ