'ದಂಗಾಲ್'ಗಾಗಿ 95 ಕೆಜಿ ತೂಕ ಹೆಚ್ಚಿಸಿಕೊಂಡ ಆಮೀರ್ ಖಾನ್

ಮಂಗಳವಾರ, 26 ಮೇ 2015 (10:20 IST)
ನಟ ಆಮೀರ್ ಖಾನ್ ಪಾತ್ರದ ಜೀವಂತಿಕೆಗಾಗಿ ಎಷ್ಟು ಕಷ್ಟ ಬೇಕಾದರೂ ಪಡುತ್ತಾರೆ. ಪ್ರಸ್ತುತ ಅವರು ದಂಗಾಲ್ ಚಿತ್ರದ ನಟನೆಗೆಂದು ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ. ಪ್ರಸ್ತುತ ಅವರ ತೂಕ 95  ಕೆಜಿಗಳಷ್ಟಿದೆ.ಅವರ ಈ ಪರಿಯ ತೂಕವನ್ನು ಆ ಪಾತ್ರ ಬಯಸಿದ ಕಾರಣದಿಂದ ಅವರು ಇಷ್ಟೊಂದು ದಪ್ಪಗಾದರಂತೆ. ತಮ್ಮ ಅತಿಯಾದ ತೂಕವು ತಾಯಿ ಮತ್ತು ಪತ್ನಿಯಲ್ಲಿ ಆತಂಕ ಉಂಟು ಮಾಡಿದೆ ಎಂದಿದ್ದಾರೆ ಮಿಸ್ಟರ್ ಪರ್ಫೆಕ್ಷನಿಸ್ಟ್. 
ವ್ರೆಸ್ಟಲರ್ ಪಾತ್ರಧಾರಿಯಾಗಿರುವ ಆಮೀರ್ ತಮ್ಮ ಅತಿ ತೂಕ ಮತ್ತು ಇನ್ನು ಹಲವಾರು ಸಂಗತಿಗಳ ಬಗ್ಗೆ ಈ ರೀತಿ ಹಂಚಿಕೊಂಡಿದ್ದಾರೆ. ಈಗ ನಾನು 95  ಕೆಜಿಗಳಷ್ಟು ತೂಕವನ್ನು ಹೊಂದಿದ್ದೇನೆ. ನನ್ನ ಉಸಿರಾಟ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ನಾನು ನನ್ನ ಲೇಸ್ ಕಟ್ಟಿಕೊಳ್ಳುವಾಗ ನನ್ನ ಹೊಟ್ಟೆ ಅಡ್ಡ ಬರುತ್ತದೆ.ಅದಾದ ಬಳಿಕ ಇಪ್ಪತ್ತು  ಸೆಕೆಂಡು ನಂತರ ನಾನು ಜೋರಾಗಿ ಉಸಿರು ತೆಗೆದುಕೊಳ್ಳುತ್ತೇನೆ. 
 
ನನ್ನ  ಅಮ್ಮ ಮತ್ತು ಪತ್ನಿಗೆ ಇದರಿಂದ ಸಾಕಷ್ಟು ಚಿಂತೆ ಆಗಿದೆ. ಅವರಿಗೆ ನನ್ನ ತೂಕದಿಂದ ಆರೋಗ್ಯ ಏರುಪೇರಾಗುತ್ತದೆ ಎನ್ನುವ ಆತಂಕವಿದೆ. ನಾನು ಆರೋಗ್ಯದ ಜೊತೆ ಆಟ ಆಡುತ್ತಿದ್ದೇನೆ ಎಂದು ನನಗೂ ಸಹ ಅವರಂತೆ ಅನ್ನಿಸಿದೆ.ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ನನ್ನ ಶೂಟಿಂಗ್ ಕೆಲಸ ಪೂರ್ಣವಾಗುತ್ತದೆ . ಜೂನ್ ತಿಂಗಳಿಡೀ ನಾನು ಯುವಕನ ಪಾತ್ರ ಮಾಡುವುದಿದೆ. ಡಿಸೆಂಬರ್ ನಲ್ಲಿ ಚಿತ್ರೀಕರಣ ಪೂರ್ಣವಾದ ನಂತರ ನಾನು ಮತ್ತೆ ಪೀಕೆ ಲುಕ್ ಹೊಂದುತ್ತೇನೆ ಎಂದಿದ್ದಾರೆ. ಇವರು ಗಜನಿ ಚಿತ್ರದಲ್ಲಿ ಎಯಿತ್ ಪ್ಯಾಕ್ ಮೂಲಕ ಜನರ ಮುಂದೆ ಬಂದಿದ್ದರು.

ವೆಬ್ದುನಿಯಾವನ್ನು ಓದಿ