ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ 11 ಮಿಲಿಯನ್ ಫಾಲೋಯರ್ಸ್

ಶನಿವಾರ, 25 ಅಕ್ಟೋಬರ್ 2014 (12:47 IST)
ಇದೇನು  ಇಂತಹ ಶೀರ್ಷಿಕೆ ಎನ್ನುವ ಅಚ್ಚರಿ ಆಗುವುದು ಸಹಜ. ಅದೇರೀತಿ, ಅಮಿತಾಬ್ ಬಚ್ಚನ್ ಅವರು ರಾಜಕೀಯಕ್ಕೆ ಮತ್ತೆ ಇಳಿದಿದ್ದಾರೆಯೇ ಎನ್ನುವ ಸಂಗತಿ ಮನದಲ್ಲಿ ಮೂಡುವುದು ಸಹಜ. ಆದರೆ ಅಂತದ್ದೇನು ಇಲ್ಲ ಬಿಡಿ, ಗುರುವಾರ ಅದೂ ದೀಪಾವಳಿಯ ದಿನದಂದು  ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು 11  ಮಿಲಿಯನ್ ಜನರು ಫಾಲೋ ಮಾಡಿದ್ದಾರೆ. 
 
ಹ್ಯಾಪಿ ದೀಪಾವಳಿ ಮತ್ತು  ಇಂದು (ಗುರುವಾರ )  11  ಮಿಲಿಯನ್ ಗಳಷ್ಟು ಫಾಲೋಯರ್ಸ್ ಆಗಿದ್ದಾರೆ.ಶುಭಾಕಾಮನೆಗಳು.. ಶುಭ ದಿನದಲ್ಲಿ ಶುಭಗಳಿಗೆ ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿದ್ದಾರೆ 72  ವರ್ಷದ ಬಿಗ್ ಬಚ್ಚನ್ ಟ್ವೀಟ್ ಮಾಡುವುದರ ಮೂಲಕ.   
 
ಹೇಮಮಾಲಿನಿ, ಮಾಧುರಿ ದೀಕ್ಷಿತ್ , ಜೂಹಿ ಚಾವ್ಲರಂತಹ ಬಾಲಿವುಡ್ ತಾರೆಯರು  ಸಹ ಈ 72  ರ ಹರೆಯದ ಹೀರೋ ಬಿಗ್ ಬಿ ಫ್ಯಾನ್ ಗಳು !ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಇರುವ ಅಮಿತಾಬ್ ಅವರು ಟೀವಿ ಷೋ ಕೌನ್ ಬನೇಗಾ ಕರೋಡ್ ಪತಿ ಯಲ್ಲಿ ಬ್ಯುಸಿಯಾಗಿದ್ದಾರೆ , ಅಲ್ಲದೆ ಶಮಿತಾಬ್ ಮತ್ತು ಪಿಕು ಚಿತ್ರಗಳಲ್ಲೂ  ಸಹಿತ ಅತಿಥಿ ಪಾತ್ರದಲ್ಲಿ ಕಂಡು ಬರುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ