ಅಮಿತಾಬ್ ಮೊಮ್ಮಗಳ ಸೆಕ್ಸಿ ಡ್ಯಾನ್ಸ್ ವೈರಲ್

ಶುಕ್ರವಾರ, 12 ಮೇ 2017 (18:49 IST)
ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಬಾಲಿವುಡ್ ಎಂಟ್ರಿ ದೂರವೇ ಇರಬಹುದು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಫೇಮಸ್ ಆಗಿದ್ದಾರೆ.

ಇತ್ತೀಚೆಗೆ, ನವ್ಯಾ ಬ್ಲಾಕ್ ಸೆಕ್ಸಿ ಉಡುಪನ್ನ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಇನ್`ಸ್ಟಾಗ್ರಾಮ್`ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ದಿಲ್ಲಿವಾಲಿ ಗರ್ಲ್ ಫ್ರೆಂಡ್ ಹಾಡಿಗೆ ನವ್ಯಾ ಸಖತ್ ಸ್ಟೆಪ್ ಹಾಕಿದ್ದಾರೆ.

ನವ್ಯಾಳಿಗೆ ಗೆಳತಿ ಸ್ಫೂರ್ತಿ ತುಂಬುತ್ತಿದ್ದು, ವಿಡಿಯೋ ತೆಗೆದಿದ್ದಾಳೆ.ನವ್ಯಾ ಡ್ಯಾನ್ಸ್ ಝಲಕ್ ಅನ್ನ ಅಮಿತಾಬ್ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದುವರೆಗೆ 45 ಸಾವಿರಕ್ಕೂ ಅಧಿಕ ಬಾರಿ ವಿಡಿಯೋ ವೀವ್ ಆಗಿದೆ.

ಸೋಶಿಯಲ್ ಮೀಡಿಯಾ ಸೆನ್ಸೇಸನ್ ಆಗಿರುವ ನವ್ಯಾ ಬಾಲಿವುಡ್ ಎಂಟ್ರಿಯನ್ನ ತಳ್ಳಿಹಾಕಿದ್ದ ಅಮಿತಾಬ್ ಬಚ್ಚನ್ ಸದ್ಯ ವಿದ್ಯಾಭ್ಯಾಸ ಮುಗಿಸಲಿ ಎಂದಷ್ಟೇ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ