ಅಮೃತಾ ಮಕ್ಕಳು ನನಗೆ ಸ್ನೇಹಿತರಂತೆ ... ನಾವು ಇರೋದೇ ಹಾಗೆ - ಕರೀನ ಕಪೂರ್

ಬುಧವಾರ, 12 ನವೆಂಬರ್ 2014 (10:33 IST)
ಸಾಮಾನ್ಯವಾಗಿ ಚಲನಚಿತ್ರ ರಂಗದಲ್ಲಿ ಮೊದಲ ಪತ್ನಿ ಆಗುವುದಕ್ಕಿಂತ ಎರಡನೇ ಹೆಂಡತಿ ಆಗುವವರ ಕಥೆಯೇ ಜಾಸ್ತಿ. ಸೂಪರ್ ಸ್ಟಾರ್, ಇಲ್ಲವೇ ಸ್ಟಾರ್ ನಿರ್ದೇಶಕ ಅಥವಾ ಸ್ಟಾರ್ ನಿಮಾಪಕ ಯಾರೇ ಆಗಿರಲಿ ಮೊದಲು ಒಂದು ಮದುವೆ ಆಗಿರುತ್ತಾರೆ.  ಅದಾದ ಬಳಿಕ ಮತ್ತೊಂದು ಮದುವೆ ಆಗ್ತಾರೆ. ತಾರ ಪತ್ನಿ ಸಹ ಅವರ ಬದುಕನ್ನು ಉಜ್ವಲ ಮಾಡುತ್ತಾಳೆ. ಈ ವಿಷಯದಲ್ಲಿ ಸೈಫ್ ಅಲಿ ಖಾನ್ ಹೊರತಲ್ಲ.

ಆತ ಮೊದಲು ಅಮೃತ ಸಿಂಗ್ ಅನ್ನೋ ತನಗಿಂತ ಏಳೆಂಟು ವರ್ಷಕ್ಕೂ ಹೆಚ್ಚು ದೊಡ್ಡ ವಯಸ್ಸಿನ ನಟಿಯೊಂದಿಗೆ ಮದುವೆ ಆಗಿದ್ದರು. ಅವರಿಬ್ಬರಿಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಹುಟ್ಟಿತು. ಅದಾದ ಬಳಿಕ ಇಬ್ಬರು ಬೇರೆ ಆದರು. ಸೈಫ್ ಲೈಫ್‌ನಲ್ಲಿ ಬಂದ ಮತ್ತೊಬ್ಬ ಹೆಣ್ಣೇ ಕರೀನ ಕಪೂರ್. ಸುಖಕರ ದಾಂಪತ್ಯ ಬದುಕನ್ನು ನಡೆಸುತ್ತಿರುವ ಕರೀನಾಗೆ ಇಬ್ಬರು ರೆಡಿಮೇಡ್ ಮಕ್ಕಳು. ಈ ಇಬ್ಬರನ್ನು ಆಕೆ ಸ್ನೇಹಿತರಂತೆ ಕಾಣುವುದಾಗಿ ಹೇಳಿದ್ದಾಳೆ.
 
ಸಾರ ಹಾಗೂ ಇಬ್ರಾಹಿಂಗೆ ಅಮೃತಾರಂತಹ ಅದ್ಭುತವಾದ ಅಮ್ಮ ಇದ್ದಾಳೆ. ಆದ್ದರಿಂದ ತಾನು ಅವರಿಗೆ ಮತ್ತೊಬ್ಬ ತಾಯಿ ಆಗುವ ಅಗತ್ಯವಿಲ್ಲ. ಈ ಕಾರದಿಂದ ನಾನು ಇವರನ್ನು ಸ್ನೇಹಿತರಂತೆ ಕಾಣುತ್ತೇನೆ ಎಂದು ಹೇಳಿದ್ದಾಳೆ.  
 
ಕೆಲವು ಬಾರಿ ನಾನು ಸಾರಾ ಶಾಂಪೇನ್  ಜೊತೆ ಗಲಾಟೆ ಮಾಡುತ್ತಿರುತ್ತೇವೆ. ಇಬ್ರಾಹಿಂ ಸಹ ಅದೇ ರೀತಿ. ಸೈಫ್ ಇದಕ್ಕೆ ಹೊರತಲ್ಲ. ನನ್ನ ಆಸೆ ಸಹ ಅದೇ. ಇವರಿಬ್ಬರು ಶಿಸ್ತುಬದ್ಧವಾಗಿ ಬೆಳೆದಮಕ್ಕಳು. ಐ ಲವ್ ದೆಮ್ ಎಂದು ಹೇಳ್ತಾಳೆ ಈ ಚೆಲುವೆ.

ವೆಬ್ದುನಿಯಾವನ್ನು ಓದಿ