ಖುಷಿ ಖುಷಿಯಾಗಿರುವ ಅಮೂಲ್ಯ .. ಯಾರ ಜೊತೆ ಗೊತ್ತೇ ??

ಗುರುವಾರ, 25 ಸೆಪ್ಟಂಬರ್ 2014 (14:20 IST)
ಖುಷಿಖುಷಿಯಾಗಿ ಅಮೂಲ್ಯ ಮತ್ತು ಗಣೇಶ್ ಇದ್ದಾರೆ ಎಂದು ಬರೆದರೆ ಇದೇನು ಹೀಗಿದೆ ವಿಷ್ಯ ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡುವುದು ಸಹಜ. ಆದರೆ, ಖುಷಿಖುಷಿಯಾಗಿ ಅನ್ನುವುದು ಸಿನಿಮಾ ಹೆಸರು . ಅದರಲ್ಲಿ ಈ ಜೋಡಿ ಒಟ್ಟಾಗಿದ್ದಾರೆ ತೆರೆಯ ಮೇಲೆ ಮೇಲೆ!!  

ಹೆಚ್.ಪಿ.ಆರ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಹರಿಪ್ರಸಾದ್ ರಾವ್,ನಾಗೇಶ್ವರ್ ರಾವ್ ಹಾಗೂ ವಿಜಯಕೃಷ್ಣ ಅವರು ನಿರ್ಮಿಸಿರುವ ಖುಷಿಖುಷಿಯಾಗಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ. ಇದು ಸಧ್ಯದಲ್ಲೇ ಅಮ್ಮು ಮತ್ತು ಗಣೇಶ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗುತ್ತಿದೆ. ಖುಷಿಖುಷಿಯಾಗಿ 2013 ರಲ್ಲಿ ತೆಲುಗು ಭಾಷೆಯಲ್ಲಿ ಬಂದ  ಗುಂಡೆ ಜಾರಿ ಗಲ್ಲಂತೈಯಿಂದೆ.
 
 ಚಿತ್ರದ ಕನ್ನಡ ವರ್ಶನ್ .ಕನ್ನಡದ ಖುಷಿ ಖುಷಿಯಾಗಿ ಚಿತ್ರವನ್ನು ಯೋಗಿ.ಜಿ.ರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಗಣೇಶ್ ಮತ್ತು ಅಮೂಲ್ಯ ಜೊತೆಗೆ  ನಂದಿನಿ ರೈ,ಸಾಧುಕೋಕಿಲ,ಸಿಲ್ಲಿಲಲ್ಲಿ ಆನಂದ್,ಅಚ್ಯುತಕುಮಾರ್ ಮುಂತಾದವರು ನಟಿಸಿದ್ದಾರೆ. 
 
ಶ್ರೀಷ ಅವರ ಛಾಯಾಗ್ರಹಣ ಹೊಂದಿರುವ ಈ ಚಿತ್ರಕ್ಕೆ  ಅನೂಪ್ ರುವೆನ್ಸ ಸಂಗೀತ  ಜೋ.ನಿ.ಹರ್ಷ ಸಂಕಲನ,ಹರ್ಷ ನೃತ್ಯ ನಿರ್ದೇಶನ  ,  ರವಿವರ್ಮರ ಸಾಹಸ ನಿರ್ದೇಶನ ಹಾಗು  ಶಿವು ಕಲಾ ನಿರ್ದೇಶನವಿದೆ. 
 

ವೆಬ್ದುನಿಯಾವನ್ನು ಓದಿ