ಎಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ತಾತನಾಗಿ ಅನಂತ್ ನಾಗ್

ಶನಿವಾರ, 25 ಜುಲೈ 2015 (10:09 IST)
ಅನಂತ್ ನಾಗ್ ಕನ್ನಡ ಚಿತ್ರರಂಗದ  ಅತ್ಯಂತ ಸ್ಫುರದ್ರೂಪಿ ನಟ. ಅವರ ನಟನೆಯ ಅನೇಕಾನೇಕ ಚಿತ್ರಗಳು ಈಗಲ್ಲೊ ಜನ ನೆನಪಿಸಿ ಕೊಳ್ಳುತ್ತಾರೆ ಅಷ್ಟೊಂದು ಪ್ರಭಾವಶಾಲಿಯಾಗಿದೆ.ಹೀರೋ ಆದ ಬಳಿಕ ತಮಗೆ ದೊರೆತ ಪೋಷಕ ಪಾತ್ರಗಳಿಗೂ ಜೀವ ತುಂಬಿದ್ದರು ನಟ ಅನಂತ್. ಅದಾದ ಬಳಿಕ ಕಿರುತೆರೆಗೆ ಪಾದಾರ್ಪಣೆ ಮಾಡಿ ಅಲ್ಲಿಯೂ ಸಹಿತ ಗೆದ್ದರು. ಇವೆಲ್ಲದರ ನಡುವೆ ಹಿರಿತೆರೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಲಾವಿದ ಅನಂತ್. ಈಗ ಅವರು ಚಾಲೆಂಜಿಂಗ್  ಸ್ಟಾರ್ ದರ್ಶನ್ ಅವರ ಚಿತ್ರದಲ್ಲಿ ಈ ಹಿರಿಯ ಕಲಾವಿದ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ತಮಗೆ ದೊರೆತ ಈ ವಿಶಿಷ್ಟ ಪಾತ್ರವನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರಿಗೆ ಅರ್ಪಣೆ ಮಾಡಿದ್ದಾರೆ ನಟ. 
ಈ ಮೊದಲು ಮನೋ ವಿಜ್ಞಾನಿ ಪಾತ್ರದಲ್ಲಿ ಕಂಡಿದ್ದ ಅನಂತ್ ಅವರು ಈಗ ಸ್ವಾತಂತ್ರ ಹೋರಾಟಗಾರನ ಪಾತ್ರಧಾರಿ ಆಗುವುದರ ಮೂಲಕ ತಮ್ಮ ಪ್ರತಿಭೆಯ ವಿವಿಧ ಮಜಲನ್ನು ಜನರ ಮುಂದೆ ಇಡುತ್ತಿದ್ದಾರೆ.ಎ ಪಿ ಅರ್ಜುನ್ ಅವರ ನಿರ್ದೇಶನದ ಹೊಸ ಚಿತ್ರದಲ್ಲಿ ದರ್ಶನ್ ತಾತನ ಪಾತ್ರಧಾರಿಯಾಗಲಿದ್ದಾರೆ ಅನಂತ್ ನಾಗ್ ಅವರು. ಪ್ರಾಮಾಣಿಕ ಹಾದಿಯಲ್ಲಿ ನಾಯಕನನ್ನು ಮುನ್ನಡೆಯುವಂತೆ ಮಾಡುವ ಪಾತ್ರದಲ್ಲಿ ಅನಂತ್ ಅವರು ಕಾಣಿಸಿ ಕೊಳ್ಳಲಿದ್ದಾರಂತೆ. ತಮಗೆ ಈ ಅವಕಾಶ ಹುಡುಕಿಕೊಂಡು ಬಂದಾಗ ಸಂತೋಷ ಹೇಳಲಾಗದಷ್ಟು ಆಯಿತಂತೆ. ವಾಸ್ತುಪ್ರಕಾರ, ಮೃಗಶಿರ, ಪ್ಲಸ್ ಚಿತ್ರಗಳಲ್ಲಿ ಅನೇಕ ಬಗೆಯ ಪಾತ್ರದ ಮೂಲಕ ಜನರ ಮುಂದೆ ಬಂದಿದ್ದ ಅನಂತ್ ಈಗ ಸ್ವಾತಂತ್ರ ಹೋರಾಟಗಾರರಾಗಿ ಬರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ