'ಪ್ಲಸ್' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದ ನಟ ಅನಂತ್‌ನಾಗ್

ಬುಧವಾರ, 8 ಜುಲೈ 2015 (10:33 IST)
ಸ್ಯಾಂಡಲ್ ವುಡ್ ಹಿರಿಯ ನಟ, ಅಭಿಜಾತ ಕಲಾವಿದ ಅನಂತ್ ನಾಗ್ ಅವರು ಶನಿವಾರ ರಾತ್ರಿ ಪ್ಲಸ್ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆ ಮಾಡಿದರು. ಈ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶಕರಾಗಿದ್ದಾರೆ ಗಡ್ಡ ವಿಜಿ. ಈ ನಿರ್ದೇಶಕ ಈಗಾಗಲೇ ದ್ಯಾವ್ರೆ ಎನ್ನುವ ಚಿತ್ರವನ್ನು ನಿರ್ದೇಶಿಸಿ ಕನ್ನಡಿಗರ ಗಮನ ಸೆಳೆದಿದ್ದಾರೆ.  ಪ್ಲಸ್  ಚಿತ್ರಕ್ಕೆ  ಭರತ್ ಬಿ ಜೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. 
ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಅಲ್ಲದೆ, ಯೋಗರಾಜ್ ಭಟ್, ವೀರ ಸಮರ್ಥ, ಚೇತನ್ ಚಂದ್ರ, ಚೇತನ್ ಗಂಧರ್ವ, ಶಾಲಿನಿ, ಶ್ರುತಿ ಹರಿಹರನ್ ಮುಂತಾದವರು ಭಾಗವಹಿಸಿದ್ದರು. ಅಲ್ಲದೆ ಈ ಸಮಯದಲ್ಲಿ  ಭರತ್ ಚಿತ್ರದ ಹಾಡುಗಳ  ಲೈವ್ ಆರ್ಕೆಸ್ಟ್ರಾ ಸಹಿತ ಉಣ ಬಡಿಸಿದರು. ಪೆನ್ ಡ್ರೈವ್ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. 
 
ಇದು ಯೋಗರಾಜ್ ಮೂವೀಸ್  ಅಡಿಯಲ್ಲಿ ನಿರ್ಮಾಣವಾಗಿದೆ. ಗಡ್ಡ ವಿಜಿ ಅತ್ಯುತ್ತಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಅಂತಹ ಚಿತ್ರ  ನಿರ್ಮಿಸಲು ಖುಷಿಯಾಗುತ್ತದೆ ಎಂದು ತಮ್ಮ ಶಿಷ್ಯನನ್ನು ಹೊಗಳಿದ್ದಾರೆ ಮಾಸ್ಟರ್ ಭಟ್. 

ವೆಬ್ದುನಿಯಾವನ್ನು ಓದಿ