Anchor Anushree Birthday: ಆಂಕರ್ ಅನುಶ್ರೀ ನಿಜಕ್ಕೂ ಈ ವರ್ಷ ಮದುವೆಯಾಗ್ತಾರಾ

Krishnaveni K

ಶನಿವಾರ, 25 ಜನವರಿ 2025 (10:47 IST)
ಬೆಂಗಳೂರು: ಕನ್ನಡ ಮನರಂಜನಾ ಲೋಕದಲ್ಲಿ ಆಂಕರ್ ಎಂದರೆ ಥಟ್ಟನೇ ಕೇಳಿಬರುವುದು ಅನುಶ್ರೀ ಹೆಸರು. ಅವರ ಮದುವೆ ಬಗ್ಗೆ ಆಗಾಗ ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈ ವರ್ಷ ನಿಜಕ್ಕೂ ಅವರು ಮದುವೆಯಾಗುತ್ತಾರಾ?

ಇಂದು ಅನುಶ್ರೀ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಶ್ರೀ ಬಳಿಕ ತಮ್ಮ ವೃತ್ತಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು. ಯಾರ ಸಹಾಯವೂ ಇಲ್ಲದೇ ಸ್ವಂತ ಪರಿಶ್ರಮದಿಂದ ಬೆಳೆದು ಬಂದ ಹೆಣ್ಣು ಮಗಳು.

ವೃತ್ತಿಪರ ನಿರೂಪಕರಲ್ಲಿ ಈಗ ದುಬಾರಿ ಸಂಭಾವನೆ ಪಡೆಯುವ, ಬಹುಬೇಡಿಕೆಯ ನಿರೂಪಕಿ ಎಂದರೆ ಅನುಶ್ರೀ. ಅವರಿಗೆ ಈಗಾಗಲೇ 36 ವರ್ಷ ಕಳೆದಿದೆ. ಸಹಜವಾಗಿಯೇ ಎಲ್ಲೇ ಹೋದರೂ ನಿಮ್ಮ ಮದುವೆ ಯಾವಾಗ ಎಂದೇ ಕೇಳುತ್ತಾರೆ. ಯಾವುದೇ ಕಾರ್ಯಕ್ರಮದಲ್ಲೂ ಅವರನ್ನು ಹೀಗೇ ಕಾಲೆಳೆಯುತ್ತಾರೆ.

ಹಿಂದೊಮ್ಮೆ ಮದುವೆ ಬಗ್ಗೆ ಕೇಳಿದಾಗ ನನಗೆ ಇದುವರೆಗೆ ಮದುವೆಯಾಗಬೇಕು ಎನಿಸಿಲ್ಲ. ನನ್ನ ಅಮ್ಮನಿಗೆ ಒಂದು ಸೂರು ಕಟ್ಟಿಕೊಡಬೇಕು, ಆರ್ಥಿಕವಾಗಿ ಸ್ವತಂತ್ರವಾಗಿರಬೇಕು ಎಂಬುದಷ್ಟೇ ನನ್ನ ಆದ್ಯತೆಯಾಗಿತ್ತು ಎಂದಿದ್ದರು. ಹಾಗಿದ್ದರೂ ಕೆಲವು ಸಮಯದ ಹಿಂದೆ ಈ ವರ್ಷ ಖಂಡಿತಾ ಮದುವೆಯಾಗುತ್ತೇನೆ ಎಂದಿದ್ದರು. ಆದರೆ ಇದುವರೆಗೆ ಅವರು ಮದುವೆ ಬಗ್ಗೆ ಸಿಹಿ ಸುದ್ದಿ ಕೊಟ್ಟಿಲ್ಲ. ಬಹುಶಃ ಈ ವರ್ಷವೂ ಅವರ ಮದುವೆ ಅನುಮಾನವೇ ಎನಿಸುತ್ತದೆ. ಆದರೆ ಯೂ ಟ್ಯೂಬ್ ಗಳಲ್ಲಿ ಅವರಿಗೆ ಈಗಾಗಲೇ ಹಲವು ಮದುವೆಯಾಗಿದೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ