BigBoss Season 11: ಹನಮಂತುಗೆ ಬೆಂಬಲ ಸೂಚಿಸಿದ ಮಾಜಿ ರನ್ನರ್

Sampriya

ಶುಕ್ರವಾರ, 24 ಜನವರಿ 2025 (19:20 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ಸೀಸನ್ 11 ಮುಗಿಯಲು ಕ್ಷಣಗಣನೆ ಶುರುವಾಗಿದ್ದು, ಇದೀಗ ಸ್ಪರ್ಧಿಯೊಬ್ಬರಿಗೆ ಮಾಜಿ ರನ್ನರ್ ಪ್ರತಾಪ್ ಅವರು ಬೆಂಬಲಕೋರಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಹನಮಂತು ಅವರು ತಮ್ಮ ನಡವಳಿಕೆ ಹಾಗೂ ಸಿಂಪ್ಲಿಸಿಟಿ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಫಿನಾಲೆ ಟಿಕೆಟ್‌ ಟಾಸ್ಕ್‌ನಲ್ಲಿ ಫೈನಲ್ ಪ್ರವೇಶಿಸಿದ ಹನಮಂತುಗೆ ಡ್ರೋನ್ ಪ್ರತಾಪ್ ಬೆಂಬಲ ಸೂಚಿಸಿದ್ದಾರೆ.

ಹಾಯ್‌.. ಡ್ರೋನ್‌ ಆರ್ಮಿ ಈ ಬಾರಿ ಇದೇ ಸ್ಪರ್ಧಿಗೆ ವೋಟ್ ಹಾಕಿ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಿಗ್‌ಬಾಸ್‌ ಸೀಸನ್‌11ರ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ