ಆಂಕರ್ ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಫೋಟೋ ವೈರಲ್

Krishnaveni K

ಶುಕ್ರವಾರ, 18 ಜುಲೈ 2025 (11:16 IST)
Photo Credit: Instagram
ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಆಂಕರ್ ಅನುಶ್ರೀ ಅವರು ಮದುವೆಯಾಗಲಿರುವ ಹುಡುಗನ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊಡಗು ಮೂಲದ ಟೆಕಿ ಜೊತೆ ಅನುಶ್ರೀ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇನ್ನೂ ಅನುಶ್ರೀ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.  ಆದರೆ ಅದಾಗಲೇ ಅವರು ಮದುವೆಯಾಗಲಿರುವ ಹುಡುಗ ಎಂದು ಫೋಟೋವೊಂದು ವೈರಲ್ ಆಗಿದೆ.

Photo Credit: Facebook
ಕೆಲವು ದಿನಗಳ ಹಿಂದೆ ಅನುಶ್ರೀ ಸಹೋದರನ ಹೋಟೆಲ್ ಉದ್ಘಾಟನೆಯಾಗಿತ್ತು. ಈ ವೇಳೆ ಪೂಜೆಯಲ್ಲಿ ಅನುಶ್ರೀ ಜೊತೆಗೇ ನಿಂತು ಆರತಿ ಬೆಳಗಿದ್ದ ವ್ಯಕ್ತಿಯೇ ಅವರ ಭಾವೀ ಪತಿ ಎನ್ನಲಾಗುತ್ತಿದೆ. ಅಂದಿನ ದಿನ ಅನುಶ್ರೀ ಜೊತೆಗೆ ಅವರ ಭಾವೀ ಪತಿ ಎಂದು ಹೇಳಲಾಗುತ್ತಿರುವ ಹುಡುಗನ ಫೋಟೋ ಈಗ ವೈರಲ್ ಆಗಿದೆ.

ಆಂಕರ್ ಅನುಶ್ರೀ ಎಲ್ಲೇ ಹೋದರೂ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಲೇ ಇದ್ದರು. ತೀರಾ ಇತ್ತೀಚೆಗೆ ಅನುಶ್ರೀ ಈ ವರ್ಷವೇ ಮದುವೆಯಾಗುವುದಾಗಿ ಹೇಳಿದ್ದರು. ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಅನುಶ್ರೀ ಆಗಸ್ಟ್ 28 ರಂದು ಹಸೆಮಣೆ ಏರಲಿದ್ದಾರಂತೆ. ಆದರೆ ಇದು ಯಾವುದೂ ಇನ್ನೂ ಅಧಿಕೃತವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ