ಮಗಳ ಸಿನಿಮಾ ನೋಡುವ ಕಾತರದಲ್ಲಿರುವ ಅನಿಲ್ ಕಪೂರ್

ಶುಕ್ರವಾರ, 11 ಸೆಪ್ಟಂಬರ್ 2015 (10:23 IST)
ಪ್ರತಿ ಹೆತ್ತವರಿಗೂ ಅವರವರ ಮಕ್ಕಳ ಸಾಧನೆ ನೋಡೋ ಖುಷಿ ಇದ್ದೇ ಇರುತ್ತೆ. ಅದಕ್ಕೆ ನಟ ಅನಿಲ್ ಕಪೂರ್ ಕೂಡ ಹೊರತಾಗಿಲ್ಲ. ಅನಿಲ್ ಕಪೂರ್ ಮಗಳು ಸೋನೆಂ ಕಪೂರ್ ಸಲ್ಮಾನ್ ಖಾನ್ ಜೊತೆ ನಟಿಸುತತಿರುವ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ ಅನಿಲ್ ಸಿನಾಮ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಪ್ರೇಮ್ ರತನ್ ಧನ್ ಪಾಯೋ ಸಿನಿಮಾವನ್ನು ನೋಡಲು ಕಾಯುತ್ತಿದ್ದೇನೆ ಅಂದಿರುವ ಅನಿಲ್ ತೆರೆ ಮೇಲೆ ಸಲ್ಮಾನ್ ಖಾನ್ ಹಾಗೂ ಸೋನಂ ಕಪೂರ್ ಸುಂದರವಾಗಿ ಕಾಣುತ್ತಾರೆ ಎಂದಿದ್ದಾರೆ.ಅದರಲ್ಲೂ ಇದು ಸೂರಜ್ ಭರ್ಜತ್ಯಾ ಅವರ ಸಿನಿಮಾ ಹಾಗಾಗಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ ಎಂದಿದ್ದಾರೆ.ಅವರೊಬ್ಬ ಗ್ರೇಟ್ ಡೈರೆಕ್ಟರ್. ಅವರ ಮಾಡಿರುವ ಸಿನಿಮಾಗಳಲ್ಲಿ ದಾಖಲೆ ಸೃಷ್ಟಿಸಿವೆ. ಅಲ್ಲದೇ ಭಾರತದಲ್ಲಿ ಸಿನಾಮ ನಿರ್ದೇಶನದ ದಿಕ್ಕನ್ನು ಬದಲಿಸಿದವರೇ ಇವರೇ ಎಂದಿದ್ದಾರೆ.
 
ಇನ್ನು ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಫ್.ಮಿಲಿ ಡ್ರಾಮಾವಾಗಿದ್ದು, ಸಲ್ಮಾನ್ ಖಾನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನು ಸಲ್ಮಾನ್ ಖಾನ್ ಹಾಗೂ ಸೋನಂ ಈ ಸಿನಿಮಾದಲ್ಲಿ ತುಂಬಾನೇ ಸುಂದರವಾಗಿ ಕಾಣುತ್ತಿದ್ದಾರಂತೆ. ಜನ ಕೂಡ ಇಷ್ಚಪಡುತ್ತಾರೆ ಅಂತಾ ಅನಿಲ್ ಹೇಳಿದ್ದಾರೆ. ಈ ಸಿನಿಮಾ ನವೆಂಬರ್ 12 ರಂದು ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ