ರೋಡಿಗಿಳಿದು ಅಧಿಕಾರಿಗಳಲ್ಲಿ ವಿಶೇಷ ಮನವಿ ಮಾಡಿದ ಅನಿರುದ್ಧ್‌, ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ

Sampriya

ಬುಧವಾರ, 28 ಮೇ 2025 (19:53 IST)
Photo Credit X
ಬೆಂಗಳೂರು: ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ನಟ ಅನಿರುದ್ಧ್ ಅವರು ವಿಶೇಷವಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್‌ ಅವರು ಗ್ರೌಂಡ್‌ ಲೆವೆಲ್‌ಗೆ ಇಳಿದು ವಿಡಿಯೋ ರೀಪೋರ್ಟ್ ಮಾಡಿದ್ದಾರೆ.  ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇಲ್ಲಿ ಪೆಟ್ರೋಲ್ ಬಂಕ್‌, ಟಿವಿಎಸ್‌ ಶೋ ರೂಂ ಇದೆ. ಈ ರಸ್ತೆಯನ್ನು ಗಮನಿಸಿದಾಗ ತುಂಬಾನೇ ಹದಗೆಟ್ಟಿದೆ. ಮೂರರಿಂದ ನಾಲ್ಕು ಕಿಲೋ ಮೀಟರ್ ಇದೇ ರೀತಿಯ ರಸ್ತೆಯನ್ನು ಕಾಣಬಹುದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.

ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.




ಬ್ರಾಂಡ್ ಬೆಂಗಳೂರು ಬರ್ಬಾದ್ ಬೆಂಗಳೂರು ಆಗಬಾರದು. ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯ ದುಸ್ಥಿತಿಯನ್ನು ನಟರಾದ ಅನಿರುದ್ಧ್ ರವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. @nitin_gadkari @DKShivakumar @BBMPofficial ಯಾರ ವ್ಯಾಪ್ತಿಗೆ ಬರುತ್ತದೆ ಎನ್ನುವ ಗುದ್ದಾಟ ಬೇಡ ರಸ್ತೆ ಸರಿಪಡಿಸಿ. ಈ ರಸ್ತೆಯಲ್ಲಿ ಗರ್ಭಿಣಿಯರು ಹೋದರೆ… pic.twitter.com/vvZkxhsLf2

— ಸನಾತನ (@sanatan_kannada) May 28, 2025

#AniruddhJatkar #Bengaluru pic.twitter.com/UuvlQolAaR

— Webdunia Kannada (@WebduniaKannada) May 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ