ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮತ್ತೊಂದು ಕೇಸ್

ಭಾನುವಾರ, 11 ಅಕ್ಟೋಬರ್ 2020 (19:56 IST)
ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ರಾಜ್ಯದಲ್ಲಿ ಕೇಸ್ ಬೀಳುವುದು ಪಕ್ಕಾ ಆದಂತಿದೆ.

ಟ್ವಿಟ್ಟರ್ ನಲ್ಲಿ ರೈತರ ಬಗ್ಗೆ ಅವಹೇಳನಕಾರಿಯಾಗಿ ನಟಿ ಕಂಗನಾ ರಣಾವತ್ ಪೋಸ್ಟ್ ಮಾಡಿದ್ದಾರೆ ಎಂದು ದೂರಲಾಗಿತ್ತು.

ನಟಿ ವಿರುದ್ಧ ಕೇಸ್ ದಾಖಲು ಮಾಡುವಂತೆ ಪೊಲೀಸರಿಗೆ ತುಮಕೂರು ಕೋರ್ಟ್​ ಆದೇಶ ನೀಡಿದೆ.
ಈ ಕುರಿತು ವಕೀಲ ಎಲ್.​ ರಮೇಶ್ ನಾಯ್ಕ್​ ಜೆಎಂಎಫ್​ಸಿ ನ್ಯಾಯಾಲಯದ ಮೊರೆ ಹೋಗಿ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ನಟಿ ಕಂಗನಾ ರಣಾವತ್ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದಾರೆ ಎಂದು ವಕೀಲ ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ