ರಶ್ಮಿಕಾ ಬಳಿಕ ಕತ್ರಿನಾ ಕೈಫ್ ಅವರ ಫೋಟೋವನ್ನು ಕೂಡ ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ರಶ್ಮಿಕಾ ಅವರ ಮತ್ತೊಂದು ವಿಡಿಯೋ ಡೀಪ್ ಫೇಕ್ ಮಾಡಲಾಗಿದೆ. ಯುವತಿಯೊಬ್ಬರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಮಾರ್ಫಿಂಗ್ ಮಾಡಲಾಗಿದೆ. ಇದನ್ನು ರಶ್ಮಿಕಾ ಅವರ ಫ್ಯಾನ್ ಪೇಜ್ ವೊಂದು ಹಂಚಿಕೊಂಡಿದೆ. ನಗುಮುಖದಲ್ಲಿರುವ ರಶ್ಮಿಕಾರ ಈ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.