ಮತ್ತೆ ಒಂದಾದ ಸೂರಿ-ಅಗ್ನಿ ಶ್ರೀಧರ್

ಶನಿವಾರ, 28 ಫೆಬ್ರವರಿ 2015 (10:29 IST)
ನಿರ್ದೇಶಕ ಸೂರಿ ಹಾಗೂ ಬರಹಗಾರ ನಿರ್ದೇಶಕ ಮತ್ತು ನಿರ್ಮಾಪಕ ಅಗ್ನಿ ಶ್ರೀಧರ್ ಅವರು ಈಗ ಒಂದಾಗಿದ್ದಾರೆ. ಅವರ ಜೋಡಿಯ ಚಿತ್ರ ಸಧ್ಯದಲ್ಲೇ ಸೆಟ್ಟೇರಲಿದೆ. ಇವರ ಕಾಂಬಿನೇಶನ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಇಷ್ಟರಲ್ಲೇ ಕೆಲಸ ಆರಂಭ ಮಾಡಲಿದೆ. 
ಅಗ್ನಿ ಶ್ರೀಧರ್ ಅವರ ಮೇಘನಾ ಮೂವಿಸ್ ಅಡಿಯಲ್ಲಿ ಸೂರಿ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಕಥೆಯನ್ನು ಇವರಿಬ್ಬರೂ ಸೇರಿ ಮಾಡಿದ್ದಾರಂತೆ. ಅಲ್ಲದೆ ಪಾತ್ರವರ್ಗವನ್ನು ಸಹಿತ ಸದ್ದಿಲ್ಲದೇ ಆಯ್ಕೆ ಮಾಡುತ್ತಿದ್ದಾರೆ ಎನ್ನುವದು ಈಗ ಗಾಂಧಿ ನಗರದಲ್ಲಿ ಹರಡಿರುವ ಸುದ್ದಿಯಾಗಿದೆ. 
 
ದೊಡ್ಡಮನೆ ಹುಡುಗ ಚಿತ್ರದ ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿರುವ, ಕೆಂಡ ಸಂಪಿಗೆ ಮಾಡಿ ಮುಗಿಸಿರುವ ಸೂರಿಗೆ ಈಗ ಹೊಸ ಪ್ರಾಜಕ್ಟ್‌ನಲ್ಲಿ ಬಿಸಿಯಾಗುವ ಸಮಯ ಬಂದಿದೆ. ದೊಡ್ಡಮನೆ ಹುಡ್ಗ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಕನ್ನಡ ಚಿತ್ರರಂಗದ ಈ ಪ್ರತಿಭೆಗಳ ಮೂಲಕ ಈಗ ಯಾವ ಭೂಗತ ನಾಯಕ ತೆರೆ ಮೇಲೆ ನಾಯಕರಾಗ್ತಾರೋ ಎಲ್ಲಕ್ಕೂ ಟೈಮ್ ಉತ್ತರ ಹೇಳುತ್ತದೆ!

ವೆಬ್ದುನಿಯಾವನ್ನು ಓದಿ