ಅನುಪಮಾ ಗೌಡ ನಗಾರಿ ಮೂಲಕ ಹಿರಿತೆರೆಗೆ ಪಾದಾರ್ಪಣೆ

ಬುಧವಾರ, 1 ಏಪ್ರಿಲ್ 2015 (10:27 IST)
ಕನ್ನಡ ಕಿರುತೆರೆಯ ಕಲಾವಿದ ಹಿರಿತೆರೆಗೆ ಹೋಗುವುದು ಹೊಸತಲ್ಲ. ಈಗ ಆ ಪಟ್ಟಿಗೆ ಅನುಪಮ ಗೌಡ ಸೇರ್ಪಡೆ ಆಗಿದ್ದಾಳೆ. ನಗಾರಿ ಚಿತ್ರದ ಮೂಲಕ ಆಕೆ ಕನ್ನಡದ ಹಿರಿತೆರೆಗೆ ಎಂಟ್ರಿ ಆಗಿದ್ದಾಳೆ. ಈ ಚಿತ ಶುಕ್ರವಾರ ಬಿಡುಗಡೆ ಆಗಲಿದೆ. ಅನುಪಮ ಹಳ್ಳಿ ದುನಿಯಾ ದಿಂದ  ಕಿರುತೆರೆಗೆ ಎಂಟ್ರಿ ಆದಳು. ಆ ಬಳಿಕ ಆಕೆ ಚಿ ಸೌ ಸಾವಿತ್ರಿ, ಆ ಬಳಿಕ ಅಕ್ಕ ಧಾರಾವಾಹಿಯಲ್ಲಿ ಅಭಿನಯಿಸಿದಳು. 
ಅದಾದ ಬಳಿಕ ಅನೇಕ  ಧಾರಾವಾಹಿಗಳಲ್ಲಿ ನಟಿಸಿದ ಅನುಪಮ ಮೂಲತಃ ಫ್ಯಾಶನ್ ಡಿಸೈನರ್. ಆಕೆ ಈ ನಟನಾರಂಗಕ್ಕೆ ಆಕಸ್ಮಿಕವಾಗಿ ಬಂದದ್ದು.ಈಗ ನಗಾರಿ ಮೂಲಕ ಸಿನಿಮಾಲೋಕದೊಳಗೆ ಪಾದಾರ್ಪಣೆ ಮಾಡುತ್ತಿದ್ದಾಳೆ. 45 ದಿನಗಳ ಚಿತ್ರೀಕರಣ ಆಗಿರುವ  ನಗಾರಿಯು ಸಕಲೇಶಪುರ , ಉಡುಪಿ, ಮದ್ದೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಿಸಿಕೊಂಡಿದೆ. ಅನುಪಮ ಗೌಡ ತನ್ನ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಪ್ರದರ್ಶಿಸಲು ನಿರ್ದೇಶಕರು ಸಹಾಯ ಮಾಡಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾಳೆ. ಒಟ್ಟಾರೆ ಕಿರುತೆರೆಯಲ್ಲಿ ಗೆದ್ದ ಈ ಚೆಲುವೆ ಈಗ ಹಿರಿತೆರೆಯತ್ತ ಕೈ ಚಾಚಿದ್ದಾಳೆ. ಆಕೆಗೆ ಗೆಲುವು ಸಿಗಲಿ. 

ವೆಬ್ದುನಿಯಾವನ್ನು ಓದಿ