ಜೀರೋ ಸೈಜ್‌ಗಾಗಿ 20 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿರುವ ಅನುಷ್ಕಾ

ಬುಧವಾರ, 4 ಮಾರ್ಚ್ 2015 (09:49 IST)
ಕೆಲವರಿಗೆ ಸಿನಿಮಾರಂಗದಲ್ಲಿ ಪ್ರವೇಶ ಆದ ತಕ್ಷಣ ಉತ್ತಮವಾದ ಫಲಿತಾಂಶ ಸಿಗುತ್ತದೆ. ಅಂತಹವರು ಒಂದೆರಡು ಚಿತ್ರಗಳಲ್ಲಿ ಯಶಸ್ವಿ ಆಗ್ತಾ ಆ ಬಳಿಕ ಕಾಣೋದೆ ಇಲ್ಲ. ಇನ್ನೊಂದಷ್ಟು ಜನರು ಚಿತ್ರರಂಗದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಷ್ಟ ಪಡುತ್ತಾರೆ.ಆದರೆ ಅಂತಹವರು ಹೆಚ್ಚುಕಾಲ ಸಿನಿ ರಂಗದಲ್ಲಿ ಇರುತ್ತಾರೆ. ಆ  ಪಟ್ಟಿಗೆ ಅನುಷ್ಕಾ ಶೆಟ್ಟಿ ಸಹ ಸೇರ್ಪಡೆ ಆಗುತ್ತಾಳೆ.ಆರಂಭಿಕ ಹಂತದಲ್ಲಿ ಅಕೆಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗದೇ ಇದ್ದರು ಸಹಿತ ನಂತರ ವಿಕ್ರಮಾರ್ಕ, ಅರುಂಧತಿಯಂತಹ ಚಿತ್ರಗಳು ಆಕೆಗೆ ಜೀವದಾನ ಮಾಡಿತು. ಅದಾದ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ ಈ ತಾರೆಯ ತಾರ ಬದುಕು ಈಗ ಹೆಚ್ಚು ಉಜ್ವಲವಾಗಿದೆ. ಪ್ರಸ್ತುತ ಅನುಷ್ಕಾ ಶೆಟ್ಟಿ 
ರುದ್ರಮದೇವಿ, ಬಾಹುಬಬಲಿ ಚಿತ್ರಗಳಲ್ಲಿ ಇದ್ದಾಳೆ. ಆ ಪಾತ್ರಗಳಿಗೆ ಅನುಗುಣವಾಗಿ ಆಕೆಯ ದೇಹಕ್ಕೆ ಕಸರತ್ತು ನೀಡಿ ಪಾತ್ರಕ್ಕೆ ಪೂರಕವಾಗಿ ಇದ್ದಾಳೆ. ಈಗ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಆಕೆಗೆ. ಅದರ ಹೆಸರು ಜೀರೋ ಸೈಜ್. ಪಿವಿಪಿ ಸಿನಿಮಾಸ್ ಅಡಿಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಪರಮ್ ವಿ ಪೊಟ್ಲೂರಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವಲ ಮುಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ನಾಯಕಿಪ್ರಧಾನ ಚಿತ್ರವಾದ ಕಾರಣ ಆಕೆ ಇಪ್ಪತ್ತು ಕೆಜಿಗಳಷ್ಟು ತೂಕ  ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಹೆಸರು ಜೀರೋ ಸೈಜ್ ಆದರೆ ಇಪ್ಪತ್ತು ಕೆಜಿ ಹೆಚ್ಚಳ ಅಂದ್ರೇನು ಎನ್ನುವ ನಿಮ್ಮ ಪ್ರಶ್ನೆಗಳಿ ಸದ್ಯದಲ್ಲಿಯೇ ಉತ್ತರ ಸಿಗುತ್ತದೆ ಅಲ್ಲಿಯವರೆಗೂ ಕಾಯಿರಿ! 

ವೆಬ್ದುನಿಯಾವನ್ನು ಓದಿ