'ಯೇ ದಿಲ್ ಹೈ ಮುಷ್ಕಿಲ್' ಶೂಟಿಂಗ್‌ನಲ್ಲಿ ಅನುಷ್ಕಾ-ರಣ್‌ಬೀರ್ ಬ್ಯುಸಿ

ಶುಕ್ರವಾರ, 11 ಸೆಪ್ಟಂಬರ್ 2015 (10:17 IST)
ಮೊನ್ನೆ ಮೊನ್ನೆಯಷ್ಟೇ ಯೇ ದಿಲ್ ಹೈ ಸಿನಿಮಾದ ಶೂಟಿಂಗ್ ಗಾಗಿ ಲಂಡನ್ ಗೆ ಹಾರಿದ್ದ ಅನುಷ್ಕಾ ಇದೀಗ ತನ್ನ ಕೆಲಸ ಆರಂಭಿಸಿದ್ದಾಳೆ. ಸಿನಿಮಾದಲ್ಲಿ ಅನುಷ್ಕಾ ಹಾಗೂ ರಣ್ ಬೀರ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು  ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಿದೆಯಂತೆ.
ಇನ್ನು ಸಿನಿಮಾದ ಶೂಟಿಂಗ್ ಕೆಲ ದಿನಳ ಹಿಂದೆಯೇ ಸಿನಾಮದ ನಿರ್ದೇಶಕ ಕರಣ್ ಜೋಹರ್ ಲಂಜನ್ ಗೆ ತೆರಳಿದ್ದರು. ಇದೀಗ ರಣ್ ಬೀರ್ ಹಾಗೂ ಅನುಷ್ಕಾ ಕೂಡ ಲಂಡನ್ ನಲ್ಲಿದ್ದು ಸಿನಿಮಾ ಚಿತ್ರೀಕರಣ ಕೆಲಸ ಭರದಿಂದ ಸಾಗುತ್ತಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರಣ್ ನನ್ನ ಪ್ರಯಾಣ ಆರಂಭವಾಗಿದೆ ಅಂತಾ ಖುಷಿ ವ್ಯಕ್ತಪಡಿಸಿದ್ದಾರೆ.
 
ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದಲ್ಲಿ ಅನುಷ್ಕಾ ಹಾಗೂ ರಣ್ ಬೀರ್ ಜೊತೆ ಐಶ್ವರ್ಯಾ ರೈ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತ್ರಿಕೋನ ಪ್ರೇಮಕಥೆಯ ಸಿನಿಮಾವಾಗಿರುವ ಈ ಚಿತ್ರ ಮುಂದಿನ ವರ್ಷ ಪ್ರೇಕ್ಷಕರೆದುರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ