ವಾಟ್ಸಪ್ ನಲ್ಲಿ ನನ್ನ ಪೀಕೆ ಚಿತ್ರ ಅಮೀರ್ ಖಾನ್ ಗಿಂತ್ ಜೋರಿದೆ..ನನ್ನ ನಂಬರ್ ಕೊಟ್ಟಿದ್ದೇನೆ

ಗುರುವಾರ, 16 ಅಕ್ಟೋಬರ್ 2014 (11:57 IST)
ಪೀಕೆ ಸಿನಿಮಾದಲ್ಲಿ ಮೊದಲ ಪೋಸ್ಟರ್ ಅದೆಷ್ಟು ಗಲಾಟೆ ಮಾಡಿತು ಎನ್ನುವ ಬಗ್ಗೆ ನಾವು ವಿವರಿಸಿದ್ದೇವೆ ಈ ಮೊದಲು. ಇದರಲ್ಲಿ ಆಮೀರ್ ಖಾನ್ ಬೆತ್ತಲೆಯಾಗಿ ರೈಲ್ವೆ ಕಂಬಿ ಮೇಲೆ ನಿಂತು ಮುಂದೆ ಟ್ರಾನ್ಸಿಸ್ಟರ್ ಹಿಡಿದ ಚಿತ್ರ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. 
 
ಈಗ ಅದರ ಎರಡರಷ್ಟು ಸುದ್ದಿಯನ್ನು ಮಾಡಲು ಅನುಷ್ಕ ಶರ್ಮ ಸಿದ್ಧ ಆಗಿದ್ದಾಳೆ. ಆ ಬಗ್ಗೆ ಸಕತ್ ವಿವಾದದ ಸೃಷ್ಟಿಗೆ ಆಕೆ ಸಿದ್ಧತೆ ನಡೆಸಿದ್ದಾಳೆ. ಈವರೆಗೂ ಪಿ ಕೆ ಯನ್ನು ಬೇರೆ ರೀತಿ ನೋಡಿದ್ದಿರಿ. ಇನ್ನು ನಾನು ಬರ್ತಾ ಇದ್ದೀನಿ. ಸಿದ್ಧವಾಗಿರಿ. ಒಂದು ಟ್ರಾನ್ಸಿಸ್ಟರ್ ಮಾತ್ರ ಧರಿಸಿ ಬರುತ್ತಿದ್ದೇನೆ ಕಾದಿರಿ ಎಂದು ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ದೀಪಾವಳಿ ಬಾಂಬ್ ಸಿಡಿಸಿದ್ದಾಳೆ.
 
ಆಕೆಯ ಪ್ರಕಾರ ಇಂದು ಆ ದೃಶ್ಯ ನೋಡ ಬಹುದಾಗಿದೆ. ತನ್ನನ್ನು ಹಾಗೆ ನೋಡಲು ಗುರುವಾರದ ತನಕ ಕಾಯಿರಿ ಎಂದು ತನ್ನ ಅಭಿಮಾನಿಗಳಿಗೆ ತಿಳಿಸಿದ್ದಳು . ಅನುಷ್ಕ ಈ ಚಿತ್ರದ ಮೋಶನ್ ಪೋಸ್ಟರ್ ನಲ್ಲಿ ತಾನು ಸಹ ಟ್ರಾನ್ಸಿಸ್ಟರ್ ಧರಿಸಿ ಬರುತ್ತಿರುವ ಬಗ್ಗೆ ತಿಳಿಸಿದ್ದಾಳೆ. ಈ ಪೋಸ್ಟರ್ ವಾಟ್ಸಪ್ ನಲ್ಲಿ ಈ ತಿಂಗಳ 16 ಅಂದರೆ ಇಂದು ಬಿಉಗದೆ ಮಾಡುತ್ತಿರುವ  ನಾಲ್ಕನೇ ಅಧಿಕೃತ ಮೋಶನ್ ಪೋಸ್ಟರ್ ಇದಾಗಿದೆ. 
 
ಕನಿಷ್ಠ ಹತ್ತು ಅದಕ್ಕಿಂತ ಹೆಚ್ಚಿನ ಮಂದಿ  ವಾಟ್ಸಪ್ ನಲ್ಲಿ ಒಂದು ಗ್ರೂಪ್ ತಯಾರಿಸಿಕೊಂಡು ಆ ಬಳಿಕ ಪೀಕೆಯ ತನ್ನ ಚಿತ್ರ ನೋಡ ಬಹುದು ಎಂದು ಹೇಳಿದ್ದಾಳೆ. ಆರೀತಿ ಆಡ್ ಮಾಡಿಕೊಳ್ಳಲು ಆಕೆ ನೀಡಿರುವ ನಂಬರ್ ಇದು 7710095890 .  ಟ್ರೈ ಮಾಡಿ .. ನೋಡಿ 
 

ವೆಬ್ದುನಿಯಾವನ್ನು ಓದಿ