ಅನುಷ್ಕ ಶರ್ಮಾಗೆ ಪಿಕೆ ರೇಡಿಯೋ ಮೇಲೆ ಪ್ರೀತಿಯಂತೆ..

ಸೋಮವಾರ, 17 ನವೆಂಬರ್ 2014 (12:41 IST)
ಅನುಷ್ಕ ಶರ್ಮಗೆ ರೇಡಿಯೋ ಕಡೆ ಮನಸ್ಸು ಬಿದ್ದಿದೆ. ಅಂದ್ರೆ ಆಕೆ ರೇಡಿಯೋ ಕೇಂದ್ರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆಯಾ? ಇನ್ನುಮುಂದೆ ರೇಡಿಯೋ ದಲ್ಲಿ ಆಕೆಯ ಧ್ವನಿ ಕೇಳ ಬಹುದು, ಹಾಗಾದ್ರೆ, ಆಕೆಯ ಮೈಮಾಟ ಕಾಣದೆ  ಇನ್ನು ಮುಂದೆ ಕೇವಲ ಧ್ವನಿ ಮಾತ್ರ ಕೇಳಬೇಕೆ ?  ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿದ್ದರೆ ಅದನ್ನು ಪಕ್ಕಕ್ಕೆ ಇಡಿ.


ಅನುಷ್ಕಳಿಗೆ ಟ್ರಾನ್ಸಿಸ್ಟರ್ ಕಡೆಗೆ ಗಮನ ಹರಿದಿದೆ.. ಅದಕ್ಕೂ ಮುನ್ನ ಇನ್ನು ಒಂದಷ್ಟು ಸಂಗತಿಗಳನ್ನು ಹೇಳ್ತಿವಿ. ಈಕೆ ಪ್ರಸ್ತುತ  ಆಮೀರ್ ಖಾನ್ ಅವರ ಜೊತೆ ಪೀಕೆ ಚಿತ್ರದಲ್ಲಿ ನಟಿಸುತ್ತಿದ್ದಾಳೆ. 
 
ಆ ಚಿತ್ರದಲ್ಲಿ ಆಮೀರ್ ಟ್ರಾನ್ಸಿಸ್ಟರ್ ಅಡ್ಡ ಹಿಡಿದು ನಗ್ನವಾಗಿ ನಿಂತಿರುವ ದೃಶ್ಯ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಆದರೆ ಆತನ ಜೊತೆಗೆ ಆ ರೇಡಿಯೋ ಸಹ ಹೆಚ್ಚು ಜನಪ್ರಿಯತೆ ಗಳಿಸಿದೆ. 
 
ಆ ಕಥೆಯಲ್ಲಿ ರೇಡಿಯೋದ್ದು ಮುಖ್ಯ ಪಾತ್ರ. ಆ ಚಿತ್ರದ ಪ್ರಚಾರದಲ್ಲಿ ಸಹಿತ ಅದು ಹೆಚ್ಚಿನ ಪ್ರಾಮುಖ್ಯತೆ ಗಳಿಸಿದೆ. ಆದ್ದರಿಂದ ಅನುಷ್ಕ ಆ ಚಿತ್ರದ ನೆನಪಿಗಾಗಿ ಆ ರೇಡಿಯೋವನ್ನು ತನ್ನ ಬಳಿ ಇಟ್ಟುಕೊಳ್ಳುವ ಆಸೆ ಆಶಯ ತೋರಿದ್ದಾಳೆ.ಈ ಬಗ್ಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತು ನಟ ಆಮೀರ್ ಮುಂದೆ ಹೇಳಿದಾಗ ಅವರಿಬ್ಬರೂ ಆ ಬಗ್ಗೆ ಓಕೆ ಎನ್ನುವುದಕ್ಕೆ ಹೋಗಿಲ್ಲವಂತೆ!
 
ಆ ವಿಷಯವನ್ನು ರಾಜ್ ಕುಮಾರ್ ಹಿರಾನಿ ಅವರು ಟ್ವೀಟ್  ಮಾಡಿ ಹೇಳುತ್ತಾ.. ಆಕೆ ಆ ರೇಡಿಯೋವನ್ನು ಕೇಳಿದ್ದು ಸತ್ಯ. ಆದರೆ ಆಕೆಯಂತೆ ನಾವು ಸಹಿತ ಆ ರೇಡಿಯೋ ಮೇಲೆ ಪ್ರೀತಿ ಹೊಂದಿದ್ದೇವೆ. ಅದನ್ನು ನೆನಪಾಗಿ ಇಟ್ಟುಕೊಳ್ಳುವ ಆಸೆ ನನಗೂ ಹಾಗು ಆಮೀರ್ ಇಬ್ಬರಿಗೂ ಇದೆ ಎಂದಿರುವ ಹಿರಾನಿ ಆ ಚಿತ್ರ ಬಿಡುಗಡೆ ಆದ ಬಳಿಕ ರೇಡಿಯೋ ಮಹತ್ವದ ಅರಿವಾಗುತ್ತದೆ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ