ಸುಲ್ತಾನ್ ಸಿನಿಮಾಗಾಗಿ ರಸ್ಲಿಂಗ್ ಕಲಿಯುತ್ತಿದ್ದಾರೆ ಅನುಷ್ಕಾ ಶರ್ಮಾ

ಶುಕ್ರವಾರ, 12 ಫೆಬ್ರವರಿ 2016 (11:21 IST)
ಸುಲ್ತಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಸಿನಿಮಾಕ್ಕ ಅನುಷ್ಕಾ ಶರ್ಮಾ ಆಯ್ಕೆಯಾಗಿರೋ ಸಂಗತಿನೂ ಎಲ್ಲರಿಗೂ ತಿಳಿದೇ ಇದೆ. ಈಗಗಾಲೇ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು ಸಿನಿಮಾಗಾಗಿ ಭರ್ಜರಿ ಕಸರತ್ತಿನಲ್ಲಿ ತೊಡಗಿದ್ದಾರೆ.

ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರು ಅನುಷ್ಕಾ ಶರ್ಮಾ ಅದಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಕೂಡ ಮಾಡುತ್ತಿದ್ದಾರೆ. ಅದಕ್ಕಾಗಿ ಅನುಷ್ಕಾ ಶರ್ಮಾ ಪರಿಣಿತರಿಂದ ರಸ್ಲಿಂಗ್ ತರಬೇತಿ ಪಡೆಯುತ್ತಿದ್ದಾರೆ. ಇನ್ನು ತಾನು ತರಬೇತಿ ಪಡೆಯುತ್ತಿರೋ ಬಗ್ಗೆ ಟ್ವಿಟರ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಅನುಷ್ಕಾ ಶರ್ಮಾ ‘ನೋ ಪೈನ್ ಮೋ ಗೈನ್ ಜಸ್ಟ್ ಟ್ರೈನ್ ‘ ಅಂತಾ ಸ್ಟೇಟಸ್ ಹಾಕಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ರೆ ಅನುಷ್ಕಾ ಸಿನಿಮಾಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋದು ಖಚಿತವಾಗ್ತಿದೆ. ಇನ್ನು ಇನ್ನು ಸಿನಿಮಾಗಾಗಿ ದೆಹಲಿಯಲ್ಲಿ ನುರಿತರಿಂದ ಅನುಷ್ಕಾ ಆರು ವಾರಗಳ ಕಾಲ ತರಬೇತಿ ಪಡೆಯಲಿದ್ದಾರಂತೆ.
 
ಸುಲ್ತಾನ್ ಸಿನಿಮಾ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅನುಷ್ಕಾ ಹಾಗೂ ಸಲ್ಮಾನ್ ಖಾನ್ ಈ ಸಿನಿಮಾದ ಮೂಲಕ ಜೊತೆಯಾಗಿ ನಟಿಸುತ್ತಿದ್ದಾರೆ.ಈ ವರ್ಷ ಈದ್ ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.
 

ವೆಬ್ದುನಿಯಾವನ್ನು ಓದಿ