ನಿರ್ದೇಶಕನ ಜತೆ ಮದುವೆ ರೂಮರ್ಸ್: ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ ಏನು ಗೊತ್ತಾ?
ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಪುತ್ರ ಪ್ರಕಾಶ್ ಜತೆ ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿರುವ ಅನುಷ್ಕಾ ‘ಈ ಯಾವ ಸುದ್ದಿಯೂ ನಿಜವಲ್ಲ. ಇಂತಹ ಗಾಳಿ ಸುದ್ದಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಇವರಿಗೆಲ್ಲಾ ನನ್ನ ಮದುವೆ ವಿಚಾರವೇ ದೊಡ್ಡದಾಗಿರುವುದು ಯಾಕೋ ಗೊತ್ತಿಲ್ಲ. ಮದುವೆ, ಸಂಬಂಧವನ್ನು ಮುಚ್ಚಿಡಲು ಸಾಧ‍್ಯವಿಲ್ಲ. ಇದು ತುಂಬಾ ಸೂಕ್ಷ್ಮ ವಿಚಾರ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಅನುಷ್ಕಾ ಹೇಳಿದ್ದಾರೆ.