ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ.
ಮೊದಲ ಮೂರು ದಿನದ ಶೋಗಳು ಈಗಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿವೆ. ವಿಶೇಷವಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಚಿತ್ರ ನೋಡಬೇಕೆಂದರೆ ಸದ್ಯಕ್ಕಂತೂ ಟಿಕೆಟ್ ಸಿಗಲ್ಲ. ಸಿಕ್ಕರೂ ನಿಮಗೆ ಬೇಕಾದ ಸಮಯಕ್ಕೆ ಸಿಗಲ್ಲ.
ಇನ್ನು ಸಿಂಗಲ್ ಸ್ಕ್ರೀನ ಗಳಲ್ಲೂ ಇದೇ ಕತೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 120 ರೂ.ಗಳಿಂದ ಆರಂಭವಾಗುತ್ತಿತ್ತು. ಆದರೆ ಈಗ 200 ರೂ.ಗಿಂತ ಕಡಿಮೆಯಿಲ್ಲ. ಅಲ್ಲೂ ಬಹುತೇಕ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಭಾನುವಾರದವರೆಗೂ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿವೆ.
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕೇಳಿದ್ರೆ ನಿಜಕ್ಕೂ ಶಾಕ್ ಆಗುವಂತಿದೆ. ಒಂದು ಟಿಕೆಟ್ ದರವೇ 1200 ರೂ.ವರೆಗೂ ಇದೆ. ವಿಶೇಷವೆಂದರೆ ಟಿಕೆಟ್ ದರ ಎಷ್ಟೇ ಇದ್ದರೂ ಈ ಚಿತ್ರವನ್ನು ವೀಕ್ಷಿಸುವ ಕುತೂಹಲವೂ ಪ್ರೇಕ್ಷಕರಲ್ಲಿ ಅಷ್ಟೇ ಇದೆ.