'ಜೀರೋ ಸೈಜ್'ನಲ್ಲಿ ಆರ್ಯನೊಂದಿಗೆ ಅನುಷ್ಕಾ ದೀರ್ಘ ಚುಂಬನ...?!

ಸೋಮವಾರ, 6 ಜುಲೈ 2015 (10:18 IST)
ದಕ್ಷಿಣ ಭಾರತದಲ್ಲಿ ಅದರಲ್ಲೂ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೆಚ್ಚು ಗದ್ದಲ ಮಾಡುತ್ತಿರುವ ಚಿತ್ರ ಅನುಷ್ಕ ಶೆಟ್ಟಿ ಅಭಿನಯದ ಜೀರೋ ಸೈಜ್. ಇದರಲ್ಲಿ ಆರ್ಯ ಅವರ ಜೊತೆ ಅನುಷ್ಕ ಅವರು ಅಭಿನಯಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಿಂದ  ಚಿತ್ರದ ಶೂಟಿಂಗ್ ಆರಂಭವಾಗಿದ್ದು ಈಗ ರಾಮೋಜಿ ರಾವ್ ಸಿಟಿಯಲ್ಲಿ ನಿರಂತರವಾಗಿ ನಡೆದಿದೆ. ಅನುಷ್ಕ ಮತ್ತು ಆರ್ಯ ನಡುವಿನ ಪ್ರಣಯದ , ಲವ್ ಪ್ರಪೋಜಲ್ ದೃಶ್ಯಗಳ ಸೀನ್ ಗಳನ್ನೂ  ಚಿತ್ರೀಕರಣ ಮಾಡುತ್ತಿದ್ದಾರೆ ಅರುಂಧತಿ ಚಿತ್ರದ ಜೇಜಮ್ಮ ಫೇಮ್ ಇರುವ ಈ ತಾರೆ ಈಗ ಆರ್ಯ ಅವರ   ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುತ್ತಿದ್ದಾರಂತೆ. ಅಂದ್ರೆ  ಆ ಹೀರೋಗೆ  ಬಿಸಿಬಿಸಿ ಮುತ್ತ ನೀಡಿ ನೋಡುಗರ ರಕ್ತ ಕಾವೇರುವಂತೆ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ಈಗ ನಡೆಯುತ್ತಿರುವ ಶೆಡ್ಯೂಲ್ ನಂತರ ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತದೆಯಂತೆ . ಇದರಲ್ಲಿ ಸಂಪೂರ್ಣ ವಿಭಿನ್ನ ಲುಕ್ ನಲ್ಲಿ ಅನುಷ್ಕ ಕಾಣುತ್ತಿದ್ದಾರಂತೆ . ಮೊದಲು ಈ ಜೋಡಿ ವರ್ಣ ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 
ಈ ಚಿತ್ರದಲ್ಲಿ ಒಂದು ಪಾತ್ರಕ್ಕೆಂದು 20  ಕೆಜಿ ತೂಕ ಸಹಿತ ಹೆಚ್ಚಿಸಿಕೊಂಡಿದ್ದಾರೆ ಅನುಷ್ಕ. ಈ ಚಿತ್ರದಲ್ಲಿ ಆರ್ಯ ಮತ್ತು ಅನುಷ್ಕ ನಡುವೆ ಎರಡು ನಿಮಿಷಗಳ ಕಾಲ ನಿರಂತರವಾಗಿ ಗಾಢವಾದ ಚುಂಬನ ನಡೆದಿದೆ ಎನ್ನುವ ಸುದ್ದಿ ಈಗ ಹೆಚ್ಚಿನ ಮಹತ್ವಪಡೆದಿದೆ.ಈ ಚಿತ್ರ ಪಿವಿಪಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಇದನ್ನು ಪ್ರಸಿದ್ಧ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ