2016 ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಕಥಾನಕ ಚಲನಚಿತ್ರ/ಮಕ್ಕಳ ಚಿತ್ರ ಪ್ರಶಸ್ತಿ , ಕಿರುಚಿತ್ರ ಪ್ರಶಸ್ತಿ, ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ “ಡಾ.ರಾಜ್ ಕುಮಾರ್ ಪ್ರಶಸ್ತಿ “ಯನ್ನು , ರಾಜ್ಯದ ಚಲನಚಿತ್ರ ರಂಗದಲ್ಲಿ ನಿರ್ದೇಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ನಿರ್ದೇಶಕರನ್ನು ಗುರುತಿಸಿ “ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ “ ಮತ್ತು ಕನ್ನಡ ಚಲನಚಿತ್ರದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ “ ಡಾ.ವಿಷ್ಣುವರ್ಧನ್ ಪ್ರಶಸ್ತಿ “ ನೀಡಲಾಗುತ್ತದೆ.
2016 ನೇ ಕ್ಯಾಲೆಂಡರ್ ವರ್ಷದ ಜೀವಿತಾವಧಿ ಸಾಧನೆ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆ ಮಾಡಲು ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ನಾಮ ನಿರ್ದೇಶನ ಮಾಡುವವರ ಹೆಸರು, ಸಾಧನೆ/ಕೊಡುಗೆಗಳುಳ್ಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡಬಹುದಾಗಿದೆ.
ಅರ್ಜಿ ಹಾಗೂ ನಾಮನಿರ್ದೇಶನಗಳನ್ನು ನಿರ್ದೇಶಕರು , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ಇವರಿಗೆ ದಿನಾಂಕ: 31-01-2017 ರೊಳಗೆ ತಲುಪುವಂತೆ ಕಳುಹಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.