ಬಿಗ್ ಬಿ ತಾತನಿಗೆ ಖುಷಿ ಹೆಚ್ಚಿಸುತ್ತಿರುವ ಆರಾಧ್ಯ

ಸೋಮವಾರ, 27 ಏಪ್ರಿಲ್ 2015 (09:51 IST)
ಪ್ರತಿಯೊಬ್ಬ ಅಜ್ಜನಿಗೂ ತನ್ನ ಮೊಮ್ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ಇರುತ್ತದೆ. ಅವರು ಮಾತುಗಳು ಜೇನಿನಂತೆ ಸಿಹಿಸಿಹಿ. ಅದೇರೀತಿಯ ಸವಿಯನ್ನು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಹೇಳಿದ್ದಾರೆ. ಅವರು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಮೊಮ್ಮಗಳು ಆರಾಧ್ಯ ಬಚ್ಚನ್ ಬಗ್ಗೆ ಇತ್ತೀಚೆಗೆ ಒಂದಷ್ಟು ಸಂಗತಿಗಳನ್ನು ಅಭಿಮಾನಿಗಳ ಮುಂದೆ ಹೊರ ಹಾಕಿದ್ದಾರೆ. 
ತಮ್ಮ ಅನುಭವವನ್ನು ಟ್ವಿಟ್ಟರ್ ಪೇಜ್ ನಲ್ಲಿ ಹೇಳುತ್ತಾ ಆರಾಧ್ಯ ನಿಮಿಷ ಬಿಡುವು ಕೊಡದೆ ತಡೆರಹಿತವಾಗಿ ಪಟಪಟನೆ ಮಾತಾಡುತ್ತಾ ಇರುತ್ತಾಳಂತೆ. ಅಲ್ಲದೆ ತನ್ನ ಸ್ನೇಹಿತರ ಬಗ್ಗೆ ಅನೇಕ ಕಥೆಗಳನ್ನು ಸಹಿತ ಅಜ್ಜನ ಬಳಿ ಹಂಚಿಕೊಳ್ಳುತ್ತಿರುತ್ತಾಳಂತೆ. ಜೊತೆಗೆ ತನ್ನ ಬೊಂಬೆಗಳ ಬಗ್ಗೆಯೂ ಸಹಿತ ಆಕೆ ವಿವರವಾಗಿ ಹೇಳುತ್ತಿರುತ್ತಾಳಂತೆ. 
 
ಆಕೆ ಹೇಳುವ ಕಥೆಗಳು, ಕಲ್ಪನೆಯಿಂದ ಕೂಡಿದ ವಿಷಯಗಳು ಕೇಳಲು ಅತ್ಯಂತ ಖುಷಿ ನೀಡುತ್ತದೆ. ಬಿಗ್ ಬಿಯ ಇಂತಹ ಅಪರೂಪದ ಅನುಭವ ಪ್ರತಿಯೊಂದು ಅಜ್ಜಂದಿರಿಗೂ ಆಗಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ.  

ವೆಬ್ದುನಿಯಾವನ್ನು ಓದಿ